ನವದೆಹಲಿ: ಅರ್ಮೇನಿಯಾಕ್ಕೆ ಕ್ಷಿಪಣಿಗಳು, ರಾಕೆಟ್ಗಳು ಮತ್ತು ಯುದ್ಧಸಾಮಗ್ರಿಗಳನ್ನು ರಫ್ತು ಮಾಡುವ ಆದೇಶಕ್ಕೆ ಭಾರತವು ಸಹಿ ಹಾಕಿದೆ. ಏಷ್ಯಾದ ಈ ರಾಷ್ಟ್ರವು ನೆರೆಯ ಅಜರ್ಬೈಜಾನ್ನೊಂದಿಗೆ ಸುದೀರ್ಘ ಗಡಿ ಸಂಘರ್ಷದಲ್ಲಿ ತೊಡಗಿರುವ ಕಾರಣ ಶಸ್ತ್ರಾಸ್ತ್ರ ಖರೀದಿ ಅದಕ್ಕೆ ನಿರ್ಣಾಯಕವಾಗಿದೆ.
ಒಪ್ಪಂದಗಳ ಮೌಲ್ಯವನ್ನು ಬಹಿರಂಗಪಡಿಸದಿದ್ದರೂ, ಮುಂಬರುವ ತಿಂಗಳುಗಳಲ್ಲಿ ಅಮೇರ್ನಿಯಾಗೆ 2,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿವೆ ಎಂದು ಅಂದಾಜಿಸಲಾಗಿದೆ. ಭಾರತವು ಶಸ್ತ್ರಾಸ್ತ್ರಗಳ ರಫ್ತು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದ್ದು, ಇದಕ್ಕಾಗಿ ನೀತಿ ಸುಧಾರಣೆಗಳನ್ನು ಮಾಡುತ್ತಿದೆ.
ಭಾರತವು ಅರ್ಮೇನಿಯಾಗೆ ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ಗಳನ್ನು ರಫ್ತು ಮಾಡಲಿದೆ. ಇದು ಈಗಾಗಲೇ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದು ಇದನ್ನು ಮೊದಲ ಬಾರಿಗೆ ರಫ್ತು ಮಾಡಲಾಗುತ್ತಿದೆ. ಈ ಪ್ರಬಲವಾದ ಶಸ್ತ್ರಾಸ್ತ್ರವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿದೆ ಮತ್ತು ಭಾರತದಲ್ಲಿ ಖಾಸಗಿ ವಲಯದ ಕಂಪನಿಗಳಿಂದ ಇದು ತಯಾರಿಸಲ್ಪಟ್ಟಿದೆ. ಸೇನೆಯು ಇತ್ತೀಚೆಗೆ ಆರು ಹೆಚ್ಚುವರಿ ಪಿನಾಕಾ ರೆಜಿಮೆಂಟ್ಗಳಿಗೆ ಆದೇಶ ನೀಡಿದೆ ಮತ್ತು ವಿಸ್ತೃತ ಶ್ರೇಣಿಯ ರಾಕೆಟ್ಗಳನ್ನು ಪರೀಕ್ಷಿಸುತ್ತಿದೆ.
ಒಪ್ಪಂದದ ಅಡಿಯಲ್ಲಿ ಭಾರತವು ಅರ್ಮೇನಿಯಾಕ್ಕೆ ಟ್ಯಾಂಕ್ ವಿರೋಧಿ ರಾಕೆಟ್ಗಳು ಮತ್ತು ಯುದ್ಧಸಾಮಗ್ರಿಗಳ ಶ್ರೇಣಿಯನ್ನು ಸಹ ಪೂರೈಸುತ್ತದೆ. ಅರ್ಮೇನಿಯಾಕ್ಕೆ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ರಫ್ತು ಮಾಡುತ್ತಿರುವುದು ಇದೇ ಮೊದಲಲ್ಲ, 2020 ರಲ್ಲಿ ಅಂದಾಜು 350 ಕೋಟಿ ರೂ ಮೌಲ್ಯದ ನಾಲ್ಕು ಸ್ವಾತಿ ರಾಡಾರ್ಗಳನ್ನು ಪೂರೈಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.