ನವದೆಹಲಿ: ಭಾರತದ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರನ್ನು ಮೂರನೇ ಅತಿ ಹೆಚ್ಚು ಅಂಕ ಗಳಿಸಿದ ಪುರುಷರ ಸಕ್ರಿಯ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮಹತ್ವದ ಹೆಗ್ಗುರುತಿಗಾಗಿ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ರೊನಾಲ್ಡೋ, ಮೆಸ್ಸಿ ಬಳಿಕ ಛೆಟ್ರಿ ಮೂರನೇ ಅತಿ ಹೆಚ್ಚು ಅಂಕ ಗಳಿಸಿದ ಪುರುಷರ ಸಕ್ರಿಯ ಅಂತಾರಾಷ್ಟ್ರೀಯ ಆಟಗಾರ ಎಂದು ಫಿಫಾ ವರ್ಲ್ಡ್ ಕಪ್ ಟ್ವಿಟ್ ಮಾಡಿದೆ.
FIFA ವಿಶ್ವಕಪ್ನ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ, “ವೆಲ್ ಡನ್ ಸುನಿಲ್ ಛೆಟ್ರಿ! ಇದು ಖಂಡಿತವಾಗಿಯೂ ಭಾರತದಲ್ಲಿ ಫುಟ್ಬಾಲ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
FIFA ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಮೂರನೇ ಸ್ಥಾನದಲ್ಲಿ ನಿಂತಿರುವುದನ್ನು ಉಲ್ಲೇಖಿಸಿ ಪೋಸ್ಟ್ ಅನ್ನು ಹಂಚಿಕೊಂಡಿದೆ. ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ನಂಬರ್ ಒನ್ ಮತ್ತು ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. ರೊನಾಲ್ಡೊ ಮತ್ತು ಮೆಸ್ಸಿಯೊಂದಿಗೆ ಛೆಟ್ರಿಯನ್ನು FIFA ಗುರುತಿಸಿದೆ. ಈ ಕ್ರಮವನ್ನು ಪ್ರಪಂಚದಾದ್ಯಂತದ ಭಾರತೀಯರು ಸ್ವಾಗತಿಸಿದ್ದಾರೆ.
Well done Sunil Chhetri! This will certainly boost football’s popularity in India. @chetrisunil11 ⚽️ 🇮🇳 https://t.co/Hh9pGtDhmh
— Narendra Modi (@narendramodi) September 28, 2022
You know all about Ronaldo and Messi, now get the definitive story of the third highest scoring active men's international.
Sunil Chhetri | Captain Fantastic is available on FIFA+ now 🇮🇳
— FIFA World Cup (@FIFAWorldCup) September 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.