ಬೀಜಿಂಗ್: ಸೆಲ್ಫಿ, ಸಾಮಾಜಿಕ ಜಾಲತಾಣಗಳು ಇಂದಿನ ಯುವಜನತೆಗೆ ಹುಚ್ಚು ಹಿಡಿಯುವಂತೆ ಮಾಡುತ್ತಿದೆ ಎಂಬುದು ನಿಜ. ಆದರೆ ಅದೇ ಹುಚ್ಚು ಜನರು ತಮ್ಮ ಅಪರಾಧ ಕೃತ್ಯಗಳನ್ನು ಬಾಯಿ ಬಿಡುವಂತೆಯೂ ಮಾಡುತ್ತಿದೆ. ಹೌದು, ಇದಕ್ಕೆ ಸಾಕ್ಷಿ ಎಂಬಂತೆ ಚೀನಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ಯುವಕನೊಬ್ಬ ತನ್ನ ಗೆಳತಿಯನ್ನು ಕೊಂದು ಆಕೆಯ ಶವದೊಂದಿಗೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ‘ಸಾರಿ, ನನ್ನನ್ನು ಕ್ಷಮಿಸು ನನ್ನ ಸ್ವಾರ್ಥಿ ಗೆಳತಿ’ ಎಂದ ಕ್ಯಾಪ್ಷನ್ ಕೊಟ್ಟಿದ್ದಾನೆ.
ಆತನ ಈ ಸೆಲ್ಫಿ ಭಾರೀ ಸುದ್ದಿ ಮಾಡುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತನ್ನ ಗೆಳತಿಯೊಂದಿಗೆ ಜಗಳವಾಡಿದ್ದ ಈತ ಜಗಳ ವಿಕೋಪಕ್ಕೆ ಹೋದಾಗ ರೊಚ್ಚಿಗೆದ್ದು ಆಕೆಯನ್ನು ಕೊಂದು ಹಾಕಿದ್ದಾನೆ. ಬಳಿಕ ಆಕೆಯ ಶವದ ಪಕ್ಕದಲ್ಲಿ ಕೂತು ಸೆಲ್ಫಿ ತೆಗೆದುಕೊಂಡಿದ್ದಾನೆ.
ಅದೇನೆಯಿರಲಿ, ಈತನ ಸೆಲ್ಫಿಯ ಹುಚ್ಚು ಈತ ಮಾಡಿದ ಅಪರಾಧವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂಬುದು ನಿಜ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.