ಟೊರೆಂಟೋ: ಕೆನಾಡದ ಟೊರೆಂಟೋದಲ್ಲಿ ಇತ್ತೀಚಿಗೆ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯನ್ನು ಕೆನಡಾದ ಸಂಸತ್ ಸದಸ್ಯರಾಗಿರುವ ಚಂದ್ರ ಆರ್ಯ ಪ್ರಬಲವಾಗಿ ಖಂಡಿಸಿದ್ದಾರೆ.
ಚಂದ್ರ ಆರ್ಯ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರಾಗಿದ್ದು, ಇವರು ಕೆನಡಾ ಸಂಸತ್ನಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ವಿಷಯ ಪ್ರಸ್ತಾಪಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಟೊರೆಂಟೋದ ಸ್ವಾಮಿ ನಾರಾಯಣ, ವಿಷ್ಣು ಮಂದಿರಗಳ ಮೇಲೆ ಕೆಲ ಕಿಡಿಗೇಡಿಗಳು ಇತ್ತೀಚಿಗೆ ದಾಳಿ ಮಾಡಿ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದಿದ್ದರು. ಈ ಘಟನೆಗೆ ಭಾರತ ಸೇರಿದಂತೆ ಜಾಗತಿಕ ಮಟ್ಟದಿಂದ ಭಾರೀ ಖಂಡನೆಗಳು ವ್ಯಕ್ತವಾಗುತ್ತಿವೆ.
“ಭಾರತ ಸೇರಿದಂತೆ ದಕ್ಷಿಣ ಏಷ್ಯಾದಿಂದ ಸಾಕಷ್ಟು ಹಿಂದೂಗಳು ಕೆನಡಾಗೆ ಬಂದು ನೆಲೆಸಿದ್ದಾರೆ. ಭಾರತೀಯ ಮೂಲದ ಹಿಂದೂಗಳು ಶಾಂತಿಪ್ರಿಯರು ಹಾಗೂ ಶ್ರಮ ಜೀವಿಗಳು. ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಉನ್ನತಿಗೆ ಶ್ರಮಿಸುತ್ತಾರೆ” ಎಂದು ಆರ್ಯ ಹೇಳಿದ್ದಾರೆ.
“ಆದರೆ ಕೆನಡಾದಲ್ಲಿ ಕೆಲವು ದುಷ್ಕರ್ಮಿಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಜನಾಂಗೀಯ ದ್ವೇಷದಿಂದ ಹಲ್ಲೆಗಳು ನಡೆಯುತ್ತಿವೆ. ಕೆನಡಾ ಸಂಸತ್ ಇದನ್ನು ಖಂಡಿಸಬೇಕು ಹಾಗೂ ಇದಕ್ಕೆ ಕಠಿಣ ಕ್ರಮಗಳನ್ನು ರೂಪಿಸಬೇಕು. ಹಿಂದೂಗಳ ಹಾಗೂ ಅವರ ಭಾವನೆಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
My statement in Canadian parliament on the recent hate crime incidents on Hindu temples in Toronto. pic.twitter.com/QgbNxe9FEG
— Chandra Arya (@AryaCanada) September 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.