ನವದೆಹಲಿ: ದೇಶ ಕಂಡ ಮಹಾನ್ ಎಂಜಿನಿಯರ್, ಕರುನಾಡಿನ ಹೆಮ್ಮೆ ಮೋಕ್ಷಗೊಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂದು ದೇಶವ್ಯಾಪಿಯಾಗಿ ಇಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಎಲ್ಲಾ ಇಂಜಿನಿಯರ್ಗಳಿಗೆ ಶುಭಾಶಯ ಕೋರಿದ್ದಾರೆ.
ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ನುರಿತ ಮತ್ತು ಪ್ರತಿಭಾವಂತ ಇಂಜಿನಿಯರ್ಗಳ ಸಮೂಹವನ್ನು ಹೊಂದಲು ನಮ್ಮ ರಾಷ್ಟ್ರವು ಆಶೀರ್ವದಿಸಲ್ಪಟ್ಟಿದೆ ಎಂದು ಟ್ವೀಟ್ನಲ್ಲಿ ಮೋದಿ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ಇಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸುವುದು ಸೇರಿದಂತೆ ಎಂಜಿನಿಯರಿಂಗ್ ಕಲಿಯಲು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವತ್ತ ಸರ್ಕಾರವು ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಇಂಜಿನಿಯರ್ಸ್ ದಿನದಂದು ರಾಷ್ಟ್ರವು ಸರ್ ಎಂ. ವಿಶ್ವೇಶ್ವರಯ್ಯನವರ ಅದ್ಭುತ ಕೊಡುಗೆಯನ್ನು ಸ್ಮರಿಸುತ್ತದೆ. ಅವರ ಕೊಡುಗೆಯು ಭವಿಷ್ಯದ ಎಂಜಿನಿಯರಿಂಗ್ ಪೀಳಿಗೆಗೆ ತಮ್ಮನ್ನು ಗುರುತಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಅವರು ಆಶಿಸಿದ್ದಾರೆ.
ಅಲ್ಲದೇ ತಾವು ಈ ವಿಷಯದ ಬಗ್ಗೆ ಮಾತನಾಡಿರುವ ಹಿಂದಿನ ಮನ್ ಕಿ ಬಾತ್ ಕಾರ್ಯಕ್ರಮಗಳ ಒಂದು ತುಣುಕನ್ನು ಸಹ ಟ್ವಿಟರ್ ಮೂಲಕ ಮೋದಿ ಹಂಚಿಕೊಂಡಿದ್ದಾರೆ.
On #EngineersDay, we remember the pathbreaking contribution of Sir M. Visvesvaraya. May he keep inspiring generations of future engineers to distinguish themselves. I am also sharing a snippet from one of the previous #MannKiBaat programmes where I talked about this subject. pic.twitter.com/2Vj3bHxVQS
— Narendra Modi (@narendramodi) September 15, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.