ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಅವರ ಜನ್ಮದಿನದಂದು ಅಂದರೆ ಸೆಪ್ಟೆಂಬರ್ 17 ರಂದು ಪ್ರಾರಂಭವಾಗಲಿದೆ.
ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಪ್ರಸಿದ್ಧ ವ್ಯಕ್ತಿಗಳು ಮತ್ತು ಹಿತೈಷಿಗಳು ನೀಡಿದ ಅಸಂಖ್ಯಾತ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜು ಮಾಡುತ್ತಾ ಬರುತ್ತಿದ್ದಾರೆ. ಇದರಿಂದ ಬರುವ ಹಣವನ್ನು ನಮಾಮಿ ಗಂಗೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವರು ವಿನಿಯೋಗಿಸುತ್ತಾರೆ.
ಈ ಬಾರಿ ಪ್ರಧಾನಿಗೆ ನೀಡಲಾದ 1,200 ಉಡುಗೊರೆಗಳು ಮತ್ತು ಸ್ಮರಣಿಕೆಗಳ ಹರಾಜು ನಡೆಯಲಿದೆ. ಈ 1,200 ಉಡುಗೊರೆಗಳಲ್ಲಿ ಅತ್ಯಂತ ಆಸಕ್ತಿದಾಯಕವಾದುವುಗಳೆಂದರೆ ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ವಾರಣಾಸಿಯ ಕಾಶಿ-ವಿಶ್ವನಾಥ ದೇವಾಲಯದ ಪ್ರತಿಕೃತಿಗಳು ಮತ್ತು ಮಾದರಿಗಳು. ಕಾಮನ್ವೆಲ್ತ್ ಗೇಮ್ಸ್, ಡೆಫ್ಲಿಂಪಿಕ್ಸ್ ಮತ್ತು ಥಾಮಸ್ ಕಪ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾ ಗೆದ್ದ ಪ್ರಶಸ್ತಿಗಳು ಕೂಡ ಇರಲಿದೆ.
ಏಸ್ ಶಟ್ಲರ್ ಕೆ ಶ್ರೀಕಾಂತ್ ಅವರ ಹಸ್ತಾಕ್ಷರ ಹೊಂದಿರುವ ಬ್ಯಾಡ್ಮಿಂಟನ್ ರಾಕೆಟ್, ಕುಸ್ತಿ, ಹಾಕಿ, ಲಾನ್ ಬೌಲಿಂಗ್ ಮತ್ತು ಪ್ಯಾರಾ-ಪವರ್ ಲಿಫ್ಟಿಂಗ್ ತಂಡಗಳ ಸದಸ್ಯರು ಆಟೋಗ್ರಾಫ್ ಮಾಡಿದ ಕ್ರೀಡಾ ಜೆರ್ಸಿಗಳನ್ನು ಸಹ ಇರಲಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನ ಮಂತ್ರಿಗೆ ಉಡುಗೊರೆಯಾಗಿ ನೀಡಿದ ರಾಣಿ ಕಮಲಾ ಪತಿಯ ಪ್ರತಿಮೆ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯವರು ನೀಡಿದ ತ್ರಿಶೂಲ, ಹಾಗೆಯೇ ಅಯೋಧ್ಯೆಯ ಪವಿತ್ರ ಮಣ್ಣನ್ನು ಹೊಂದಿರುವ ಅಮೃತ ಕಲಶವೂ ಹರಾಜಾಗಲಿದೆ/
ಇ-ಹರಾಜಿನಲ್ಲಿ ಭಾಗವಹಿಸಲು, ಸಾರ್ವಜನಿಕರು https://pmmementos.gov.in/ ಗೆ ಭೇಟಿ ನೀಡಬಹುದು. ಸೆಪ್ಟೆಂಬರ್ 17 ಮತ್ತು ಅಕ್ಟೋಬರ್ 2, 2022 ರ ನಡುವೆ ಹರಾಜು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.