ರಾಯ್ಪುರ: ಬಡವರಿಗೆ ನಮ್ಮ ದೇಶದಲ್ಲಿ ಶುದ್ದೀಕರಿಸದೆ ಕೊಳಚೆ ನೀರನ್ನು ಕುಡಿಯಲು ಸರಬರಾಜು ಮಾಡುವುದು ಸಾಮಾನ್ಯ ಆದರೆ ಮಂತ್ರಿಗಳ ವಿಷಯಕ್ಕೆ ಬಂದರೆ ಅವರಿಗೆ ಶುದ್ದೀಕರಿಸಿ, ಪರೀಕ್ಷಿಸಿ ನೀರು ಕೊಡುವುದು ವಾಡಿಕೆ. ಹೀಗಿದ್ದರೂ ಇಬ್ಬರು ಪ್ರಮುಖ ನಾಯಕರಿಗೆ ನೀಡಿದ ನೀರಿನ ಬಾಟಲಿಯಲ್ಲಿ ಹಾವಿನ ಮರಿಗಳು ಪತ್ತೆಯಾಗಿವೆ.
ಛತ್ತೀಸ್ಗಢ ರಾಜಧಾನಿ ರಾಯ್ಪುರದ ಬಿಜೆಪಿ ಕಛೇರಿಯಲ್ಲಿ ನಡೆದ ಸಭೆಗೆ ಹಾಜರಾಗಿದ್ದ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಅವರಿಗೆ ನೀಡಿದ್ದ ನೀರಿನ ಬಾಟಲಿಯಲ್ಲಿ ಹಾವಿನ ಮರಿಗಳು ಇದ್ದವು.
ರಮಣ್ ಸಿಂಗ್ ಅವರ ಮೆಡಿಕಲ್ ಟೀಮ್ನಲ್ಲಿ ವೈದ್ಯೆಯೊಬ್ಬರು ಈ ಹಾವಿನ ಮರಿಯನ್ನು ಪತ್ತೆ ಹಚ್ಚಿ ಕೂಡಲೇ ತಿಳಿಸಿದ್ದಾರೆ. ‘ಅಮನ್ ಅಕ್ವಾ’ ಎಂಬ ಹೆಸರಿನಡಿ ಈ ನೀರಿನ ಬಾಟಲಿಯನ್ನು ಪ್ಯಾಕ್ ಮಾಡಲಾಗಿತ್ತು.
ಘಟನೆಯಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಸಭೆಯಲ್ಲಿ ಹಂಚಲು ತಂದಿದ್ದ ತಿಂಡಿ ತಿನಿಸುಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.
ಅಮನ್ ಅಕ್ವಾ ರಾಯ್ ಪುರನ ಬಿಜೆಪಿ ಅಲ್ಪಸಂಖ್ಯಾತ ನಾಯಕ ಸೈಯದ್ ಅಲಿ ಅಮನ್ ಅವರಿಗೆ ಸೇರಿದ್ದು. ನಾನು ನೋಡುವಾಗ ಬಾಟಲಿ ಸೀಲ್ ಒಡೆಯಲಾಗಿತ್ತು, ಇದು ನನ್ನ ವಿರುದ್ಧ ಮಾಡಿರುವ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.