ಕೊಲಂಬೋ: ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಶುಕ್ರವಾರ ಥಾಯ್ಲೆಂಡ್ನಿಂದ ಶ್ರೀಲಂಕಾಗೆ ಮರಳಿದ್ದಾರೆ. ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರ ಸರ್ಕಾರದ ವಿರುದ್ಧ ಬೃಹತ್ ದಂಗೆಗಳು ಭುಗಿಲೆದ್ದ ನಂತರ ದೇಶವನ್ನು ತೊರೆದಿದ್ದ ಅವರು ಸುಮಾರು ಎರಡು ತಿಂಗಳ ನಂತರ ವಾಪಾಸ್ಸಾಗಿದ್ದಾರೆ.
73 ವರ್ಷದ ರಾಜಪಕ್ಸೆ ಅವರು ಕೊಲಂಬೊದಲ್ಲಿನ ಅಧ್ಯಕ್ಷರ ಭವನ ಮತ್ತು ರಾಜಧಾನಿಯ ಇತರ ಹಲವಾರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಜನಸಮೂಹ ಮಾಡಿದ ನಂತರ, ಅವರ ರಾಜೀನಾಮೆಗೆ ಭಾರೀ ಒತ್ತಾಯಗಳು ಕೇಳಿ ಬಂದ ಬಳಿಕ ಜುಲೈ 13ರಂದು ದೇಶವನ್ನು ತೊರೆದಿದ್ದರು.
ಗೊಟಾಬಯ ಅವರು ಸಿಂಗಾಪುರ್ ಏರ್ಲೈನ್ಸ್ ವಿಮಾನದಲ್ಲಿ ಶ್ರೀಲಂಕಾಕ್ಕೆ ಮರಳಿದ್ದಾರೆ. ಬ್ಯಾಂಕಾಕ್ ಮತ್ತು ಕೊಲಂಬೊ ನಡುವೆ ನೇರ ವಿಮಾನಗಳಿಲ್ಲದ ಕಾರಣ ಅವರು ವಿಮಾನವನ್ನು ಪಡೆಯಲು ಥಾಯ್ಲೆಂಡ್ನಿಂದ ಸಿಂಗಾಪುರಕ್ಕೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಅಧ್ಯಕ್ಷರಾಗಿರುವ ಅವರು ಸರ್ಕಾರಿ ಮನೆ ಮತ್ತು ಇತರ ಸವಲತ್ತುಗಳಿಗೆ ಅರ್ಹರಾಗಿದ್ದಾರೆ.
ಗೊಟಾಬಯ ಶ್ರೀಲಂಕಾ ವಾಯುಪಡೆಯ ವಿಮಾನದಲ್ಲಿ ಶ್ರೀಲಂಕಾದಿಂದ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದರು ಮತ್ತು ನಂತರ ಸಿಂಗಾಪುರಕ್ಕೆ ತೆರಳಿದ್ದರು, ಅಲ್ಲಿಂದ ಅವರು ಜುಲೈ 14 ರಂದು ತಮ್ಮ ರಾಜೀನಾಮೆಯನ್ನು ಕಳುಹಿಸಿದರು.
ನಂತರ, ಅವರು ತಾತ್ಕಾಲಿಕ ಆಶ್ರಯವನ್ನು ಕೋರಿ ಥೈಲ್ಯಾಂಡ್ಗೆ ಹಾರಿದರು. ರಾಜಪಕ್ಸೆ ಅವರು ಇನ್ನೂ ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಕಾರಣ 90 ದಿನಗಳ ಕಾಲ ದೇಶದಲ್ಲಿ ಉಳಿಯಬಹುದು ಎಂದು ಥಾಯ್ಲೆಂಡ್ನ ವಿದೇಶಾಂಗ ಸಚಿವ ಡಾನ್ ಪ್ರಮುದ್ವಿನೈ ಹೇಳಿದ್ದರು.
ಆದರೆ, ರಾಜಪಕ್ಸೆ ಅವರಿಗೆ ಥಾಯ್ಲೆಂಡ್ನಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರಲಿಲ್ಲ. ಅವರನ್ನು ಹೋಟೆಲ್ಗೆ ಸೀಮಿತಗೊಳಿಸಲಾಗಿತ್ತು ಮತ್ತು ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದರು ಎಂದು ವರದಿಯಾಗಿದೆ.
ಗೊಟಾಬಯ ಪದಚ್ಯುತಗೊಂಡ ನಂತರ, ಶ್ರೀಲಂಕಾದ ಸಂಸತ್ತು ಅಂದಿನ ಹಂಗಾಮಿ ಅಧ್ಯಕ್ಷ ಮತ್ತು ಆರು ಬಾರಿ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಹೊಸ ರಾಷ್ಟ್ರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿತು. ಅವರು 225-ಸದಸ್ಯ ಸಂಸತ್ತಿನಲ್ಲಿ ಅತಿ ದೊಡ್ಡ ಬಣವಾದ ಶ್ರೀಲಂಕಾ ಪೊದುಜನ ಪೆರಮುನ (SLPP) ಯ ಬೆಂಬಲವನ್ನು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.