ಇಸ್ಲಾಮಾಬಾದ್: ಪಾಕಿಸ್ಥಾನವು ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, 5.7 ಮಿಲಿಯನ್ಗೂ ಅಧಿಕ ಜನರು ಬಾಧಿತರಾಗಿದ್ದಾರೆ. ಆ ದೇಶವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರವಾಹವನ್ನು ಎದುರಿಸುತ್ತಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಪಾಕಿಸ್ಥಾನದಲ್ಲಿ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಮುಂದುವರಿದಿದೆ. ನ್ಯೂಸ್ ಇಂಟರ್ನ್ಯಾಷನಲ್ ಪ್ರಕಾರ, ದುರಂತವು ಸುಮಾರು 719,558 ಜಾನುವಾರುಗಳನ್ನು ಕೊಂದಿದೆ. ಪ್ರವಾಹದ ವಿನಾಶಕಾರಿ ಪರಿಣಾಮವನ್ನು ನಿಭಾಯಿಸಲು ಅಲ್ಲಿನ ಸರ್ಕಾರವು ದೇಣಿಗೆಗಾಗಿ ಮನವಿ ಮಾಡಿದೆ.
ಪ್ರವಾಹವು ಪಾಕಿಸ್ಥಾನದಲ್ಲಿ ಕೃಷಿ ಭೂಮಿ ಮತ್ತು ಮೂಲಸೌಕರ್ಯಗಳ ಮೇಲೂ ಪರಿಣಾಮ ಬೀರಿದ್ದು, ಪ್ರಾಂತ್ಯಗಳಾದ್ಯಂತ 949,858 ಮನೆಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.
ಪಾಕಿಸ್ಥಾನದಲ್ಲಿ ಪ್ರವಾಹದಿಂದ ಸತ್ತವರ ಸಂಖ್ಯೆ 1,000 ದಾಟಿದೆ ಮತ್ತು ಜೂನ್ನಿಂದ ಸಾವಿರಾರು ಜನರು ಗಾಯಗೊಂಡಿದ್ದಾರೆ ಅಥವಾ ಸ್ಥಳಾಂತರಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಜೂನ್ 14 ರಿಂದ ಮಳೆ ಮತ್ತು ಪ್ರವಾಹದಿಂದ ಕನಿಷ್ಠ 1,033 ಜನರು ಸಾವನ್ನಪ್ಪಿದ್ದಾರೆ ಮತ್ತು 1,527 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (NDMA) ಉಲ್ಲೇಖಿಸಿ ಪಾಕಿಸ್ಥಾನದ ಜಿಯೋ ನ್ಯೂಸ್ ವರದಿ ಮಾಡಿದೆ.
ಅಂಕಿಅಂಶಗಳ ಪ್ರಕಾರ, ಬಲೂಚಿಸ್ತಾನದಲ್ಲಿ ನಾಲ್ವರು, ಗಿಲ್ಗಿಟ್ ಬಾಲ್ಟಿಸ್ತಾನ್ನಲ್ಲಿ ಆರು, ಖೈಬರ್ ಪಖ್ತುಂಖ್ವಾದಲ್ಲಿ 31 ಮತ್ತು ಸಿಂಧ್ನಲ್ಲಿ 76 ಮಂದಿ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದಾದ್ಯಂತ ಜೂನ್ 14 ರಿಂದ 3,451.5 ಕಿಮೀ ರಸ್ತೆ ಹಾಳಾಗಿದೆ ಮತ್ತು 149 ಸೇತುವೆಗಳು ಕುಸಿದಿದೆ, ನೂರಾರು ಅಂಗಡಿಗಳು ನಾಶವಾಗಿವೆ ಎಂದಿದೆ.
ಒಟ್ಟು 949,858 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾಗಿವೆ. ಒಟ್ಟು 662,446 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 287,412 ಸಂಪೂರ್ಣವಾಗಿ ನಾಶವಾಗಿವೆ. 719,558 ಜಾನುವಾರುಗಳು ಸಹ ಸಾವನ್ನಪ್ಪಿವೆ ಎನ್ನಲಾಗಿದೆ.
ಜಿಯೋ ನ್ಯೂಸ್ ಪ್ರಕಾರ, ಪಾಕಿಸ್ತಾನದ ಕನಿಷ್ಠ 110 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಅವುಗಳಲ್ಲಿ 72 ಜಿಲ್ಲೆಗಳು ವಿಪತ್ತಿಗೆ ಒಳಗಾಗಿವೆ ಎಂದು ಘೋಷಿಸಿವೆ.
ಒಂದು ದಶಕದಲ ಪಾಕಿಸ್ತಾನವು ತನ್ನ ಭೀಕರವಾದ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಿದೆ. ಪ್ರವಾಹವು ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಿತು, ನಂತರ ಪಾಕಿಸ್ಥಾನ ಸರ್ಕಾರವು “ರಾಷ್ಟ್ರೀಯ ತುರ್ತುಸ್ಥಿತಿ” ಘೋಷಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.