ನವದೆಹಲಿ: ಭಾರತದ ಸ್ಮಾರ್ಟ್ವಾಚ್ ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ (y-o-y) ಶೇಕಡಾ 347 ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದ್ದು, 2022 ರ ಎರಡನೇ ತ್ರೈಮಾಸಿಕದಲ್ಲಿ ಎರಡನೇ ಅತಿದೊಡ್ಡ ಸ್ಮಾರ್ಟ್ವಾಚ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಈ ಮೂಲಕ ಚೀನಾವನ್ನು ಹಿಂದಿಕ್ಕಿದೆ.
ಕೌಂಟರ್ಪಾಯಿಂಟ್ ಸಂಶೋಧನಾ ವರದಿಯ ಪ್ರಕಾರ, ಫೈರ್-ಬೋಲ್ಟ್ ಮತ್ತು ನಾಯ್ಸ್ನಂತಹ ಭಾರತೀಯ ಸ್ವದೇಶಿ ಬ್ರಾಂಡ್ಗಳು ಜಾಗತಿಕ ಮಾರುಕಟ್ಟೆ ಪಾಲಿನಲ್ಲಿ ಉನ್ನತ ಸ್ಥಾನಗಳನ್ನು ಪಡೆದಿವೆ. ಉತ್ತರ ಅಮೆರಿಕಾವು ಅತಿದೊಡ್ಡ ಸ್ಮಾರ್ಟ್ ವಾಚ್ ಮಾರುಕಟ್ಟೆಯಾಗಿ ಅಗ್ರ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
ಹಿಂದಿನ ತ್ರೈಮಾಸಿಕದಲ್ಲಿ ಚೀನಾ ಎರಡನೇ ಸ್ಥಾನದಲ್ಲಿತ್ತು ಆದರೆ ವರದಿಯ ಪ್ರಕಾರ, ಕೋವಿಡ್ -19 ಲಾಕ್ಡೌನ್ಗಳು ಮತ್ತು ನಕಾರಾತ್ಮಕ ಆರ್ಥಿಕ ಬೆಳವಣಿಗೆಯಿಂದಾಗಿ ಗ್ರಾಹಕರ ಬೇಡಿಕೆ ಕಡಿಮೆಗೊಂಡಿದ್ದರಿಂದ ಚೀನಾದ ಸ್ಮಾರ್ಟ್ ವಾಚ್ ಬೇಡಿಕೆ ಶೇಕಡಾ 10 ರಷ್ಟು ಇಳಿಕೆ ಕಂಡು ಮೂರನೇ ಸ್ಥಾನಕ್ಕೆ ಇಳಿಯಿತು. ಇದಲ್ಲದೆ, ಹಿಂದಿನ ತ್ರೈಮಾಸಿಕದಲ್ಲಿ ಮೂರನೇ ಸ್ಥಾನದಲ್ಲಿದ್ದ ಯುರೋಪ್, ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ 13 ಶೇಕಡಾ y-o-y ಕುಸಿತದೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಎರಡನೇ ಅತಿದೊಡ್ಡ ಸ್ಮಾರ್ಟ್ ವಾಚ್ ಮಾರುಕಟ್ಟೆಯಾಗಿ ಭಾರತದ ಬೆಳವಣಿಗೆಯು ಸ್ವದೇಶಿ ಬ್ರಾಂಡ್ಗಳಿಂದ ನಡೆಯುತ್ತಿದೆ ಎಂಬುದು ವಿಶೇಷ ಮತ್ತು ಹೆಮ್ಮೆಯ ಸಂಗತಿ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.