ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಲ್ಲಿಯವರೆಗೆ 130 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ತಮ್ಮ ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಿಸಿದ್ದಾರೆ, ಇದು ಅಮೆರಿಕಾದ ಜನಸಂಖ್ಯೆಯ ಸುಮಾರು ಒಂದು ಶೇಕಡಾವನ್ನು ಹೊಂದಿರುವ ಸಮುದಾಯಕ್ಕೆ ಸಿಕ್ಕ ಉತ್ತಮ ಪ್ರಾತಿನಿಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ಭಾರತೀಯ ಮೂಲದವರನ್ನು ತಮ್ಮ ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ನೇಮಿಸುವ ಮೂಲಕ ಅವರು ಜೋ ಬೈಡನ್ ಅವರು 2020 ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ ಈ ಸಮುದಾಯಕ್ಕೆ ನೀಡಿದ ಭರವಸೆಯನ್ನು ಪೂರೈಸಿದ್ದಾರೆ. ಅಲ್ಲದೇ 80 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ನೇಮಿಸಿದ್ದ ಡೊನಾಲ್ಡ್ ಟ್ರಂಪ್ ಮತ್ತು 60 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸಿದ್ದ ಬರಾಕ್ ಒಬಾಮಾ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ನಾಲ್ವರು ಸೇರಿದಂತೆ ವಿವಿಧ ರಾಜ್ಯ ಮತ್ತು ಫೆಡರಲ್ ಹಂತಗಳಲ್ಲಿ 40 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರು ಚುನಾಯಿತರಾಗಿದ್ದಾರೆ.
“ಭಾರತೀಯ-ಅಮೆರಿಕನ್ನರು ಸೇವಾ ಪ್ರಜ್ಞೆಯಿಂದ ತುಂಬಿದ್ದಾರೆ ಮತ್ತು ಇದು ಖಾಸಗಿ ವಲಯದ ಬದಲಿಗೆ ಸಾರ್ವಜನಿಕ ಸೇವೆಯಲ್ಲಿ ಸ್ಥಾನಗಳನ್ನು ಪಡೆಯಲು ಅವರ ಉತ್ಸಾಹ ಪ್ರತಿಫಲಿಸುತ್ತಿದೆ” ಎಂದು ಸಿಲಿಕಾನ್ ವ್ಯಾಲಿ ಮೂಲದ ಉದ್ಯಮಿ ಎಂ ಆರ್ ರಂಗಸ್ವಾಮಿ ಹೇಳಿದ್ದಾರೆ.
ತಮ್ಮ ಸೆನೆಟರ್ ದಿನಗಳಿಂದಲೂ ಭಾರತೀಯ ಸಮುದಾಯದೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿರುವ ಬೈಡನ್, 2020 ರಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು.
ಬೈಡನ್ ಅವರ ಭಾಷಣ ಬರಹಗಾರ ವಿನಯ್ ರೆಡ್ಡಿ, ಕೋವಿಡ್-19 ನಲ್ಲಿ ಅವರ ಮುಖ್ಯ ಸಲಹೆಗಾರ ಡಾ ಆಶಿಶ್ ಝಾ, ಹವಾಮಾನ ನೀತಿಯ ಸಲಹೆಗಾರ ಸೋನಿಯಾ ಅಗರ್ವಾಲ್, ಅಪರಾಧ ನ್ಯಾಯದ ವಿಶೇಷ ಸಹಾಯಕ ಚಿರಾಗ್ ಬೈನ್ಸ್, ಸಿಬ್ಬಂದಿ ನಿರ್ವಹಣೆಯ ಕಚೇರಿಯ ಮುಖ್ಯಸ್ಥ ಕಿರಣ್ ಅಹುಜಾ, ಅವರ ಹಿರಿಯ ಸಲಹೆಗಾರ ನೀರಾ ಟಂಡೆನ್ ಮತ್ತು ಅವರ ಡ್ರಗ್ ಝಾರ್ ರಾಹುಲ್ ಗುಪ್ತಾ ಭಾರತೀಯ ಮೂಲದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.