ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಕಾಣಿಸಿಕೊಳ್ಳಲಿದೆ. 12 ಮೀಟರ್ ಉದ್ದದ 921 ಬಸ್ಗಳನ್ನು ಒದಗಿಸುವ ಗುತ್ತಿಗೆ ಟಾಟಾ ಮೋಟಾರ್ಸ್ ಕಂಪನಿ ಪಾಲಾಗಿದೆ.
ಟಾಟಾ ಮೋಟರ್ಸ್ ಸಂಸ್ಥೆ ಅತಿ ಕಡಿಮೆ ಬಿಡ್ ದಾಖಲಿಸಿ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿದೆ. ವಿವಿಧ ಹಂತಗಳಲ್ಲಿ ಅದು ಎಲೆಕ್ಟ್ರಿಕ್ ಬಸ್ ಗಳನ್ನು ರಾಜ್ಯ ರಾಜಧಾನಿಗೆ ಪೂರೈಕೆ ಮಾಡಲಿದೆ.
ಚಾಲಕ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಟಾಟಾ ಮೋಟಾರ್ಸ್ ಕಂಪನಿಯೇ ವಹಿಸಿಕೊಂಡಿದೆ. ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿಗಳು ಆಗಿರಲಿದ್ದಾರೆ. ಈ ಬಸ್ಗೆ ವಿನ್ಯಾಸವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಿ ನಿರ್ಮಾಣ ಮಾಡಲಾಗುತ್ತಿದೆ.
ಈ ಬಸ್ ಪೂರೈಸಲು ಗುತ್ತಿಗೆ ಸಿಕ್ಕಿರುವುದು ಸಂತಸದ ವಿಷಯ, ದೆಹಲಿ ಸಾರಿಗೆ ನಿಗಮದಿಂದ 1500 ಬಸ್ ಗಳು, ಪಶ್ಚಿಮ ಬಂಗಾಳದಿಂದ ಸಾವಿರದ 1180 ಬಸ್ಗಳ ಪೂರೈಕೆಗೆ ಗುತ್ತಿಗೆ ದೊರೆತಿದೆ. 30 ದಿನಗಳ ಅಂತರದಲ್ಲಿ ಒಟ್ಟಾರೆ 3600 ಈ ಬಸ್ ಗಳನ್ನು ಪೂರೈಸಲು ಅವಕಾಶ ಸಿಕ್ಕಿದೆ ಎಂದು ಟಾಟಾ ಮೋಟರ್ಸ್ ಉಪಾಧ್ಯಕ್ಷರು ರೋಹಿತ್ ಶ್ರೀವಾಸ್ತವ್ ಹೇಳಿದ್ದಾರೆ
921 ಎಲೆಕ್ಟ್ರಿಕ್ ಬಸ್ ಗಳನ್ನು ಕಂಪನಿಯು ವಿವಿಧ ಹಂತಗಳಲ್ಲಿ ಪೂರೈಸಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಜಿ ಸತ್ಯವತಿ ಹೇಳಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.