ನವದೆಹಲಿ: ನಕಲಿ ಮತ್ತು ಭಾರತ ವಿರೋಧಿ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 8 ಯೂಟ್ಯೂಬ್ ಚಾನೆಲ್ ಮತ್ತು 1 ಫೇಸ್ಬುಕ್ ಅಕೌಂಟ್ ಅನ್ನು ಭಾರತ ನಿಷೇಧಿಸಿದೆ. ಇದರಲ್ಲಿ 7 ಭಾರತ ಮತ್ತು 1 ಪಾಕಿಸ್ಥಾನ ಯೂಟ್ಯೂಬ್ ಚಾನೆಲ್ ಆಗಿದೆ.
ಕಳೆದ ವರ್ಷ ಡಿಸೆಂಬರ್ನಿಂದ ನಿಷೇಧಿತ ಮಾಧ್ಯಮಗಳ ಸಂಖ್ಯೆ ಈ ಮೂಲಕ 102 ಕ್ಕೆ ತಲುಪಿದೆ.
ಐಟಿ ನಿಯಮಗಳು 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಇವುಗಳನ್ನು ನಿರ್ಬಂಧಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
“ನಿಷೇಧಿತ ಎಂಟು ಯೂಟ್ಯೂಬ್ ಚಾನೆಲ್ಗಳು ಸುಮಾರು 86 ಲಕ್ಷ ಚಂದಾದಾರರು ಮತ್ತು 114 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದವು. ಭಾರತದ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ, ತಪ್ಪು ಮಾಹಿತಿ ನೀಡುವ ಕಾರ್ಯವನ್ನು ನಿರಂತರ ಮಾಡುತ್ತಿದ್ದವು” ಎಂದು ಸಚಿವಾಲಯ ಹೇಳಿದೆ.
ನಿರ್ಬಂಧಿಸಲಾದ ಭಾರತೀಯ ಚಾನೆಲ್ಗಳಲ್ಲಿ ‘ಸಬ್ ಕುಚ್ ದೇಖೋ’ ಅತಿ ಹೆಚ್ಚು ಚಂದಾದಾರರನ್ನು ಹೊಂದಿದೆ, 19.4 ಲಕ್ಷ ಚಂದಾದಾರರು ಮತ್ತು ಸುಮಾರು 33 ಕೋಟಿ ವೀಕ್ಷಣೆಗಳನ್ನು ಹೊಂದಿದೆ. ನಿಷೇಧಗಳ ಪಟ್ಟಿಯಲ್ಲಿ ಲೋಕತಂತ್ರ ಟಿವಿ ಸಹ ಸೇರಿದೆ. ಅದರ ಫೇಸ್ಬುಕ್ ಖಾತೆಯನ್ನು ಸಹ ನಿಷೇಧಿಸಲಾಗಿದೆ – ಜೊತೆಗೆ U&V TV, AM ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, SeeTop5TH, ಮತ್ತು Sarkari ಅಪ್ಡೇಟ್ ಅನ್ನು ಕೂಡ ನಿಷೇಧಿಸಲಾಗಿದೆ.
‘ನ್ಯೂಸ್ ಕಿ ದುನ್ಯಾ’ ಎಂಬ ಪಾಕಿಸ್ಥಾನದ ಚಾನೆಲ್ ಅನ್ನು ನಿಷೇಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.