ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆಯು ಸಾಮೂಹಿಕ ಮತಾಂತರವನ್ನು ನಿಷೇಧಿಸುವ ಹಿಮಾಚಲ ಪ್ರದೇಶ ಧರ್ಮದ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ, 2022 ಅನ್ನು ಅಂಗೀಕರಿಸಿದೆ.
ವಿಧೇಯಕವನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ವಿರೋಧ ಪಕ್ಷದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರೂ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಮಸೂದೆಯು ಸಾಮೂಹಿಕ ಮತಾಂತರವನ್ನು ಸಾಮೂಹಿಕ ಮತಾಂತರ ಎಂದರೆ ಎರಡು ಅಥವಾ ಹೆಚ್ಚಿನ ಜನರನ್ನು ಒಂದೇ ಸಮಯದಲ್ಲಿ ಮತಾಂತರ ಮಾಡುವುದು.
ಬಲವಂತದ ಮತಾಂತರದ ಶಿಕ್ಷೆಯನ್ನು ಏಳು ವರ್ಷದಿಂದ ಗರಿಷ್ಠ 10 ವರ್ಷಗಳಿಗೆ ಹೆಚ್ಚಿಸಲು ಭಸೂದೆ ಪ್ರಸ್ತಾಪಿಸುತ್ತದೆ. ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಶುಕ್ರವಾರ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ಸಾಮೂಹಿಕ ಮತಾಂತರ ತಡೆಗೆ ಮಸೂದೆ ತರಲಾಗಿದೆ ಎಂದರು. ಹಿಮಾಚಲದ ರೋಹ್ರು ರಾಂಪುರ ಮತ್ತು ಬಂಜಾರ್ನಲ್ಲಿ ಸಾಮೂಹಿಕ ಮತಾಂತರದ ಉದಾಹರಣೆಗಳನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.