ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಭಾರತೀಯ ಪಡೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ ಆತಿಥ್ಯವನ್ನು ಸ್ವೀಕರಿಸಿದೆ.
ಭಾರತದ ಕ್ರೀಡಾಳುಗಳ ಪಡೆ 22 ಚಿನ್ನ ಸೇರಿದಂತೆ 61 ಪದಕಗಳನ್ನು ಜಯಿಸಿ ದೇಶಕ್ಕೆ ಕೀರ್ತಿ ತಂದಿದೆ. ಪಿವಿ ಸಿಂಧು, ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಲಕ್ಷ್ಯ ಸೇನ್ ಅವರಂತಹ ತಾರೆಯರು ಚಿನ್ನದ ಪದಕವನ್ನು ಗೆದ್ದಿದ್ದಾರೆ.
“ನಮ್ಮ CWG 2022 ತಂಡದೊಂದಿಗೆ ಸಂವಹನ ನಡೆಸಲು ಉತ್ಸುಕವಾಗಿದೆ. ಅವರ ಅತ್ಯುತ್ತಮ ಸಾಧನೆಗಳ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
“ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ನಾವು 4 ಹೊಸ ಕ್ರೀಡೆಗಳಲ್ಲಿ ನಮ್ಮ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದೇವೆ. ಲಾನ್ ಬಾಲ್ನಿಂದ ಅಥ್ಲೆಟಿಕ್ಸ್ವರೆಗೆ ಅಭೂತಪೂರ್ವ ಪ್ರದರ್ಶನವನ್ನು ನಮ್ಮ ಕ್ರೀಡಾಳುಗಳು ನೀಡಿದ್ದಾರೆ. ಇದರೊಂದಿಗೆ ಹೊಸ ಕ್ರೀಡೆಗಳತ್ತ ಯುವಕರ ಆಸಕ್ತಿ ಹೆಚ್ಚಾಗುತ್ತದೆ. ನಾವು ಇದನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು. ಈ ಹೊಸ ಕ್ರೀಡೆಗಳಲ್ಲಿ ಸಾಧನೆ ಹೆಚ್ಚಾಗಬೇಕು” ಎಂದು ಪ್ರಧಾನಿ ಹೇಳಿದ್ದಾರೆ.
Compared to last time, this time we paved our way to victory in 4 new sports. There was an unprecedented performance-from Lawn Balls to Athletics. With this, the interest of youth in new sports will increase. We have to further improve our performance in these new sports: PM Modi pic.twitter.com/4ed8MIXwlf
— ANI (@ANI) August 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.