ವಿಶ್ವಸಂಸ್ಥೆ: ಚೀನಾ ಮತ್ತೊಮ್ಮೆ ತಾನು ಭಯೋತ್ಪಾದಕರ ಪರ ಎಂಬುದನ್ನು ಸಾಬೀತುಪಡಿಸಿದೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಅಬ್ದುಲ್ ರವೂಫ್ ಅಜರ್ ಅನ್ನು ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರಿಸುವ ಭಾರತ ಹಾಗೂ ಅಮೆರಿಕದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಲ್ಲಿ ಚೀನಾ ತಡೆ ಹಿಡಿದಿದೆ.
ಅಬ್ದುಲ್ ರವೂಫ್ ಅಜರ್ ವಿರುದ್ಧ ಡಿಸೆಂಬರ್ 2020 ರಲ್ಲಿಯೇ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ.
ಅಜರ್ ಒಬ್ಬ ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸುವ ಹಾಗೂ ಆತನ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ, ಪ್ರಯಾಣ ನಿರ್ಬಂಧಿಸುವ, ಶಸ್ತ್ರಾಸ್ತ್ರ ನಿರ್ಬಂಧಿಸುವ ಭಾರತ ಮತ್ತು ಅಮೆರಿಕಗಳು ಮಂಡಿಸಿದ್ದ ಪ್ರಸ್ತಾವನೆಗೆ ಬುಧವಾರ ಚೀನಾ ತಡೆ ಒಡ್ಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕನನ್ನು ಕಪ್ಪುಪಟ್ಟಿಗೆ ಸೇರಿಸಲು ಅಮೆರಿಕ ಮತ್ತು ಭಾರತವು ಮಾಡಿದ ಪಟ್ಟಿಯನ್ನು ಚೀನಾ ತಡೆ ಹಿಡಿದಿರುವುದು ಎರಡು ತಿಂಗಳೊಳಗೆ ಇದು ಎರಡನೇ ಬಾರಿಯಾಗಿದೆ.ಈ ವರ್ಷದ ಜೂನ್ನಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಪಟ್ಟಿ ಮಾಡಲು ಭಾರತ ಮತ್ತು ಅಮೆರಿಕಗಳ ಜಂಟಿ ಪ್ರಸ್ತಾವನೆಯನ್ನು ಚೀನಾ ಕೊನೆಯ ಕ್ಷಣದಲ್ಲಿ ತಡೆಹಿಡಿದಿತ್ತು. ಮಕ್ಕಿ ಅಮೆರಿಕದಿಂದ ಘೋಷಿತನಾದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ, 26/11 ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಸೋದರ ಮಾವ.
ಪಾಕಿಸ್ಥಾನ ತನ್ನ ನೆಲದಲ್ಲ ಭಯೋತ್ಪಾದಕರನ್ನು ಪೋಷಿಸಿದರೆ, ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕರಿಗೆ ಪರೋಕ್ಷ ಬೆಂಬಲವನ್ನು ನೀಡುತ್ತಿದೆ. ಈ ಮೂಲಕ ಎರಡೂ ದೇಶಗಳು ತಾವು ವಿಶ್ವ ಶಾಂತಿಗೆ ಮಾರಕ ಎಂಬುದನ್ನು ಪದೇ ಪದೇ ಸಾಬೀತುಪಡಿಸಿ ತೋರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.