ಗೋರೆಗಾಂವ್: ಭಾರತದಲ್ಲಿನ ಸೌದಿ ರಾಯಭಾರಿಯ ನಿವಾಸದಲ್ಲಿ ಇಬ್ಬರು ನೇಪಾಳಿ ಮಹಿಳೆಯರ ಮೇಲೆ ಕಳೆದ ಹಲವಾರು ದಿನಗಳಿಂದ ಅತ್ಯಾಚಾರ ಎಸಗಲಾಗುತ್ತಿತ್ತು ಎಂಬ ಭಯಾನಕ ವರದಿ ಬಹಿರಂಗವಾಗಿದೆ.
ಗೋರೆಗಾಂವ್ನಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಘಟನೆಯ ಸಂಪೂರ್ಣ ವರದಿ ನೀಡುವಂತೆ ವಿದೇಶಾಂಗ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಗೋರೆಗಾಂವ್ ಪೊಲೀಸರಿಗೆ ಆಗ್ರಹಿಸಿದ್ದಾರೆ.
ಇಬ್ಬರು ನೇಪಾಳಿ ಯುವತಿಯರನ್ನು ಕಳ್ಳಸಾಗಾಣೆ ಮಾಡಲಾಗಿದೆ ಎಂದು ಎನ್ಜಿಓವೊಂದು ಪ್ರಕರಣ ದಾಖಲಿಸಿದ್ದು, ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.
ಘಟನೆಯ ಸಂಬಂಧ ಸೌದಿ ರಾಯಭಾರಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿದ್ದು, ಆತನ ಪತ್ನಿ ಮತ್ತು ಮಗಳ ವಿರುದ್ಧ ಕಿರುಕುಳ, ದೌರ್ಜನ್ಯದ ಪ್ರಕರಣ ದಾಖಲಿಸಲಾಗಿದೆ.
ಸೌದಿಯಲ್ಲಿ ಉನ್ನತ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆಯೊಬ್ಬಳು ಈ ಯುವತಿಯರನ್ನು ಸೌದಿಯ ಜದ್ಹಾಗೆ ಕಳುಹಿಸಿದ್ದಳು. ಅಲ್ಲಿಂದ ಇವರನ್ನು ಗೋರೆಗಾಂವ್ಗೆ ಕರೆತರಲಾಗಿತ್ತು. ಇಲ್ಲಿ ರಾಯಭಾರಿಯ ಗೆಸ್ಟ್ಹೌಸ್ನಲ್ಲಿ ಅವರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರಗಳನ್ನು ನಿರಂತರವಾಗಿ ಎಸಗಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ನೇಪಾಳ ವಿದೇಶಾಂಗ ಸಚಿವಾಲಯ ಭಾರತದ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.