ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿರುವ ರೀತಿಗೆ ಇಡೀ ವಿಶ್ವವೇ ಬೆರಗಾಗಿದೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಪೂಜಾ ಗೆಹಲೋಟ್ ಅವರಿಗೆ ಮೋದಿ ಹೇಳಿದ ಸ್ಪೂರ್ತಿದಾಯಕ ಪದಗಳು ಪಾಕಿಸ್ತಾನವನ್ನು ಕೂಡ ನಿಬ್ಬೆರಗಾಗುವಂತೆ ಮಾಡಿದೆ.
ಕಂಚಿನ ಪದಕ ಗೆದ್ದ ಬಳಿಕ ಭಾವುಕವಾಗಿ ಮಾತನಾಡಿದ್ದ ಪೂಜಾ ಗೆಹಲೋಟ್ ಅವರು, ಬರ್ಮಿಂಹ್ಯಾಮ್ ನಲ್ಲಿ ರಾಷ್ಟ್ರಗೀತೆ ಮೊಳಗುವಂತೆ ಮಾಡಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು.
ಆಕೆಯ ಮಾತಿಗೆ ಸ್ಪಂದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಸಾಂತ್ವಾನ ಹೇಳಿದ್ದಾರೆ. “ಪೂಜಾ, ನಿನ್ನ ಪದಕ ಸಂಭ್ರಮಕ್ಕಾಗಿ ಇದೇ ಹೊರತು ಕ್ಷಮೆಯಾಚಿಸಲು ಅಲ್ಲ. ನಿನ್ನ ಜೀವನ ಪಯಣ ನಮಗೆ ಸ್ಪೂರ್ತಿ ನೀಡುತ್ತದೆ, ನಿನ್ನ ಯಶಸ್ಸು ಸಂತೋಷ ನೀಡುತ್ತದೆ. ನೀನು ಇನ್ನಷ್ಟು ಸಾಧನೆ ಮಾಡಲಿರುವೆ. ಸದಾ ಮಿನುಗುತ್ತಿರು” ಎಂದಿದ್ದರು.
ಪ್ರಧಾನಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಪಾಕಿಸ್ತಾನದ ಪತ್ರಕರ್ತ ಶಿರಾಜ್ ಹಸನ್ ಈ ಬಗ್ಗೆ ಉಲ್ಲೇಖಿಸಿ, “ಭಾರತ ತನ್ನ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿರುವ ರೀತಿ ಇದು. ಪೂಜಾ ಗೆಹಲೋಟ್ ಕಂಚಿನ ಪದಕ ಗೆದ್ದಿದ್ದಾರೆ ಮತ್ತು ಬಂಗಾರದ ಪದಕ ಗೆಲ್ಲದಿದ್ದಕ್ಕೆ ದುಃಖ ವ್ಯಕ್ತಪಡಿಸಿದ್ದರು. ಆಕೆಗೆ ಮೋದಿ ಸ್ಪಂದನೆ ನೀಡಿದ್ದಾರೆ. ಇಂತಹ ಸಂದೇಶಗಳನ್ನು ಪಾಕಿಸ್ತಾನದ ಪ್ರಧಾನಿ ಅಥವಾ ಅಧ್ಯಕ್ಷರಿಂದ ಎಂದಾದರೂ ನೋಡಿದ್ದೇವೆಯೇ? ಪಾಕಿಸ್ತಾನದ ಕ್ರೀಡಾಪಟುಗಳು ಪದಕ ಗೆಲ್ಲುತ್ತಿದ್ದಾರೆ ಎಂಬುವುದಾದರೂ ಅವರಿಗೆ ಗೊತ್ತಿದೆಯೇ?” ಎಂದಿದ್ದಾರೆ.
ಇನ್ನೂ ಹಲವಾರು ಮಂದಿ ಮೋದಿಯವರ ಸಂವೇದನಾಶೀಲ ಪ್ರತಿಕ್ರಿಯೆಗೆ ಮೆಚ್ಚುಗೆಗಳನ್ನು ತಿಳಿಸಿದ್ದಾರೆ.
Dang. May not agree with his politics but this is an incredible thing for a head of state to say to a sportsperson..
— Dallas Cricket (@DallasCricket) August 7, 2022
You love him OR hate him but this one is the best and cuttest thing any athlete would like to hear… myself being an athlete I know how it feels and when grind so hard and have to satisfy yourself in less then top most position 💯 https://t.co/AOy0s3dbDj
— Prathama 🇮🇳 (@Prathama_35) August 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.