News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ನಮ್ಮ ಕ್ಲಿನಿಕ್’ ಗಳಿಗೆ ಜನರಿಂದ ಲೋಗೋ ಆಹ್ವಾನಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ‘ನಮ್ಮ ಕ್ಲಿನಿಕ್’ ಗಳಿಗೆ ಲೋಗೋಗಳನ್ನು ರಾಜ್ಯ ಸರ್ಕಾರ ಆಹ್ವಾನಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಅವರು “ನಮ್ಮ ಕ್ಲಿನಿಕ್ ಗಳಿಗೆ ಆರೋಗ್ಯ ಇಲಾಖೆಯು ಲಾಂಛನಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಲಾಂಛನದ ವಿನ್ಯಾಸಕಾರರಿಗೆ ಮುಖ್ಯಮಂತ್ರಿ ಮತ್ತು ಸಚಿವರಿಂದ ವಿಶೇಷ ಗೌರವ ಸಿಗಲಿದೆ” ಎಂದಿದ್ದಾರೆ.

ಲಾಂಛನ ವಿನ್ಯಾಸ ಸ್ಪರ್ಧೆಗೆ ಶುಕ್ರವಾರದಿಂದಲೇ ಚಾಲನೆ ದೊರೆತಿದೆ. ಆಗಸ್ಟ್ 15ರವರೆಗೆ ಲಾಂಛನಗಳನ್ನು ಕಳುಹಿಸಿಕೊಡಬಹುದು.

ಈ ಬಗ್ಗೆ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆಯು, “ನಮ್ಮ ಕ್ಲಿನಿಕ್ ಗಳಿಗೆ ವಿಶಿಷ್ಟವಾದ ಗುರುತನ್ನು ನಾವು ಎದುರು ನೋಡುತ್ತಿದ್ದೇವೆ. ಸೃಜನಾತ್ಮಕ ಮತ್ತು ನವೀನ ಲಾಂಛನವನ್ನು ವಿನ್ಯಾಸ ಮಾಡಲು ರಾಜ್ಯದ ಜನರಿಗೆ ಅವಕಾಶ ನೀಡಲಾಗುತ್ತಿದೆ. ರಾಜ್ಯದ 436 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭ ಮಾಡಲಿದೆ. ರಾಜ್ಯದ ಆರೋಗ್ಯ ವ್ಯವಸ್ಥೆಗೆದು ಹೊಸ ಸ್ಪರ್ಶ ನೀಡಲಿದೆ” ಎಂದಿದೆ.

logo4nammaclinic@gmail.comಗೆ ಲಾಂಛನಗಳನ್ನು ಕಳುಹಿಸಿಕೊಡಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top