News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಮಂಗಳಯಾನʼ ಬಗೆಗಿನ ಸಂಸ್ಕೃತ ಸಾಕ್ಷ್ಯಚಿತ್ರ ʼಯಾನಂʼ ಪ್ರದರ್ಶನಕ್ಕೆ ಸಿದ್ಧ

ನವದೆಹಲಿ: ವಿಶ್ವ ಸಿನಿಮಾ ಇತಿಹಾಸದಲ್ಲೇ ಮೊದಲ ವಿಜ್ಞಾನ-ಸಂಸ್ಕೃತ ಚಿತ್ರ ‘ಯಾನಂ’ ಈ ತಿಂಗಳು ಪ್ರೇಕ್ಷಕರನ್ನು ತಲುಪಲು ಸಿದ್ಧವಾಗಿದೆ. ಭಾರತದ ಯಶಸ್ವಿ ಮಂಗಳಯಾನ ಮಿಷನ್ ಅನ್ನು ಆಧರಿಸಿದ ಸಿನಿಮಾ ಇದಾಗಿದೆ.

ಭಾರತದ ಐತಿಹಾಸಿಕ ‘ಮಾರ್ಸ್ ಆರ್ಬಿಟರ್ ಮಿಷನ್ (MOM)ʼ ಅಥವಾ ‘ಮಂಗಳಯಾನ’ ನ ಯಶಸ್ಸಿನ ಕಥೆಯ ಸುತ್ತ ಸುತ್ತುವ ಶಾಸ್ತ್ರೀಯ ಭಾಷೆಯಲ್ಲಿನ ಬಹುನಿರೀಕ್ಷಿತ ವಿಜ್ಞಾನ ಸಾಕ್ಷ್ಯಚಿತ್ರವು ಆಗಸ್ಟ್ 21 ರಂದು ಚೆನ್ನೈನಲ್ಲಿ ಆಯ್ದ ಪ್ರೇಕ್ಷಕರ ಮುಂದೆ ಪ್ರಥಮವಾಗಿ ಪ್ರದರ್ಶನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

MOM ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2013 ರಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಚೆನ್ನೈನಲ್ಲಿ ನಡೆಯುವ ಸಮಾರಂಭದಲ್ಲಿ ಸಿನಿಮಾದ ಪ್ರೀಮಿಯರ್ ಅನ್ನು ಬಿಡುಗಡೆ ಮಾಡಲಿದ್ದಾರೆ, ಇದರಲ್ಲಿ ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ ರಾಧಾಕೃಷ್ಣನ್ ಮತ್ತು ಪ್ರಸ್ತುತ ವಿಎಸ್ಎಸ್ಸಿ ನಿರ್ದೇಶಕ ಎಸ್ ಉನ್ನಿಕೃಷ್ಣನ್ ನಾಯರ್ ಸಹ ಭಾಗವಹಿಸಲಿದ್ದಾರೆ.

‘ಯಾನಂ’ ರಾಧಾಕೃಷ್ಣನ್ ಅವರ “My Odyssey: Memoirs of the Man Behind the Mangalyaan Mission” ಪುಸ್ತಕವನ್ನು ಆಧರಿಸಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ವಿನೋದ ಮನ್ಕಾರ ಇದನ್ನು ನಿರ್ದೇಶನ ಮಾಡಿದ್ದಾರೆ

”ಇಸ್ರೋದ ಸಾಮರ್ಥ್ಯ ಮತ್ತು ಅದರ ವಿಜ್ಞಾನಿಗಳ ಸಾಮರ್ಥ್ಯಗಳನ್ನು ಜಗತ್ತಿನ ಮುಂದೆ ಬಿಂಬಿಸುವುದು ಸಾಕ್ಷ್ಯಚಿತ್ರದ ಉದ್ದೇಶವಾಗಿದೆ. ಭಾರತೀಯ ವಿಜ್ಞಾನಿಗಳು ಎಲ್ಲ ಮಿತಿಗಳನ್ನು ದಾಟಿ ಸಂಕೀರ್ಣ ಮಂಗಳಯಾನವನ್ನು ಮೊದಲ ಪ್ರಯತ್ನದಲ್ಲಿಯೇ ಹೇಗೆ ಯಶಸ್ವಿಗೊಳಿಸಿದ್ದಾರೆ ಎಂಬುದನ್ನು ಇದು ವಿವರಿಸುತ್ತದೆ” ಎಂದು ಮನ್ಕಾರ ಹೇಳಿದ್ದಾರೆ.

ಇಸ್ರೋದ ಸಂಪೂರ್ಣ ಬೆಂಬಲದೊಂದಿಗೆ ಸಿನಿಮಾ ಮಾಡಲಾಗಿದೆ ಎಂದು ಮನ್ಕಾರ ಹೇಳಿದ್ದಾರೆ.

45 ನಿಮಿಷಗಳ ಸಾಕ್ಷ್ಯಚಿತ್ರವು ಎಲ್ಲಾ ರೀತಿಯಿಂದಲೂ ಸಂಪೂರ್ಣ ಸಂಸ್ಕೃತ ಚಲನಚಿತ್ರವಾಗಿದೆ, ಏಕೆಂದರೆ ಸಂಪೂರ್ಣ ಚಿತ್ರಕಥೆ ಮತ್ತು ಸಂಭಾಷಣೆಗಳು ಪ್ರಾಚೀನ ಸಂಸ್ಕೃತ ಭಾಷೆಯಲ್ಲೇ ಇದೆ.

ನಿರ್ದೇಶಕರ “ಪ್ರಿಯಮಾನಸಂ” ವಿಶ್ವದ ಮೂರನೇ ಸಂಸ್ಕೃತ ಚಲನಚಿತ್ರವಾಗಿದ್ದು, ಇದು ಆ ಭಾಷೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ವಿಜ್ಞಾನಿಗಳ ಸಮುದಾಯಕ್ಕಾಗಿ ಮತ್ತು ದೇಶದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಇದನ್ನು ಪ್ರದರ್ಶಿಸುವುದರ ಜೊತೆಗೆ, ನಿರ್ದೇಶಕರು ತಮ್ಮ ಸಾಕ್ಷ್ಯಚಿತ್ರದ ಜಾಗತಿಕ ಪ್ರೀಮಿಯರ್ ಅನ್ನು ಸಹ ಯೋಜಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top