News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನ: 2 ದಶಕಗಳ ಬಳಿಕ ಸಾರ್ವಜನಿಕರಿಗಾಗಿ ತೆರೆದ 1,200 ವರ್ಷ ಹಳೆಯ ದೇಗುಲ

ಲಾಹೋರ್: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯಲ್ಲಿರುವ 1,200 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯದ ಬಾಗಿಲನ್ನು ಇಂದು ಸಾರ್ವಜನಿಕರಿಗೆ ತೆರೆಯಲಾಗಿದೆ

ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳನ್ನು ನೋಡಿಕೊಳ್ಳುವ ಫೆಡರಲ್ ಸಂಸ್ಥೆಯಾದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಕಳೆದ ತಿಂಗಳು ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಬಜಾರ್ ಬಳಿ ಇರುವ ವಾಲ್ಮೀಕಿ ದೇವಸ್ಥಾನವನ್ನು ಕ್ರಿಶ್ಚಿಯನ್ ಕುಟುಂಬದಿಂದ ಹಿಂಪಡೆದಿದೆ. ಎರಡು ದಶಕಗಳ ಹಿಂದೆ ಈ ಕುಟುಂಬ ದೇಗುಲವನ್ನು ಸ್ಥಳವನ್ನು ವಶಪಡಿಸಿಕೊಂಡಿತ್ತು ಎನ್ನಲಾಗಿದೆ.

ಕೃಷ್ಣ ದೇವಾಲಯಕ್ಕೆ ಅಂಟಿಕೊಂಡಿರುವ ವಾಲ್ಮೀಕಿ ದೇವಾಲಯವು ಲಾಹೋರ್‌ನಲ್ಲಿರುವ ಏಕೈಕ  ಹಿಂದೂ ದೇವಾಲಯವಾಗಿದೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿರುವ ಕ್ರೈಸ್ತ ಕುಟುಂಬ ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜಾತಿಯ ಹಿಂದೂಗಳಿಗೆ ಮಾತ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಡುತ್ತಿತ್ತು.

ಇಟಿಪಿಬಿ ವಕ್ತಾರ ಅಮೀರ್ ಹಶ್ಮಿ ಅವರು ವಾಲ್ಮೀಕಿ ದೇವಸ್ಥಾನವನ್ನು ಬುಧವಾರ ಔಪಚಾರಿಕವಾಗಿ ಎಲ್ಲಿಗೂ ಮುಕ್ತಗೊಳಿಸಿದ್ದಾರೆ, ಈ ಸಂದರ್ಭವನ್ನು ಆಚರಿಸಲು 100 ಕ್ಕೂ ಹೆಚ್ಚು ಹಿಂದೂಗಳು, ಕೆಲವು ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮುಖಂಡರು ಅಲ್ಲಿ ಸೇರಿದ್ದರು ಎನ್ನಲಾಗಿದೆ.

ಮುಂದಿನ ದಿನಗಳಲ್ಲಿ ಮಾಸ್ಟರ್ ಪ್ಲಾನ್ ಪ್ರಕಾರ ವಾಲ್ಮೀಕಿ ದೇವಸ್ಥಾನವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುವುದು ಎಂದು ಹಶ್ಮಿ ತಿಳಿಸಿದ್ದಾರೆ.

ಇಟಿಪಿಬಿ ದೇವಸ್ಥಾನದ ಭೂಮಿಯನ್ನು ಕಂದಾಯ ದಾಖಲೆಯಲ್ಲಿ ವರ್ಗಾಯಿಸಿದೆ, ಆದರೆ ಕುಟುಂಬವು 2010-2011ರಲ್ಲಿ ಆಸ್ತಿಯ ಮಾಲೀಕ ತಾನು ಎಂದು ಹೇಳಿಕೊಂಡು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದೆ.

ವ್ಯಾಜ್ಯಕ್ಕೆ ಹೋಗುವುದರ ಜೊತೆಗೆ, ಕುಟುಂಬವು ವಾಲ್ಮೀಕಿ ಸಮಾಜದ ಹಿಂದೂಗಳಿಗೆ ಮಾತ್ರ ದೇವಾಲಯವನ್ನು ಮಾಡಲಾಗಿದೆ ಎಂದು ವಾದಿಸಿತ್ತು, ಹೀಗಾಗಿ ಇಟಿಪಿಬಿ ನ್ಯಾಯಾಲಯಕ್ಕೆ ಹೋಗಿ ಹೋರಾಡಿ ದೇಗುಲವನ್ನು ಮರಳಿ ಪಡೆದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top