News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೈವಾನ್‌ ಸಮೀಪ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದ ಚೀನಾ

ಬೀಜಿಂಗ್:‌ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಬಳಿಕ ಚೀನಾ ಯುದ್ಧೋನ್ಮಾದದಲ್ಲಿ ತೇಲಾಡುತ್ತಿದೆ.  ತೈವಾನ್‌ನ ಈಶಾನ್ಯ ಮತ್ತು ನೈಋತ್ಯ ಕರಾವಳಿಯ ಸುತ್ತಲಿನ ನೀರಿನಲ್ಲಿ ಚೀನಾ ಹಲವಾರು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ತೈವಾನ್ ಹೇಳಿದೆ.

ಚೀನಾ ಕೂಡ ಈ ಸುದ್ದಿಯನ್ನು ದೃಢಪಡಿಸಿದೆ. ಈಸ್ಟರ್ನ್ ಥಿಯೇಟರ್ ಕಮಾಂಡ್‌ನ ರಾಕೆಟ್ ಫೋರ್ಸ್ ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸಾಂಪ್ರದಾಯಿಕ ಕ್ಷಿಪಣಿ ಉಡಾವಣೆ ನಡೆಸಿತು ಎಂದು ಚೀನಾದ ಸರ್ಕಾರಿ ಮಾಧ್ಯಮ ತಿಳಿಸಿದೆ. ಅಲ್ಲದೇ ಗುರಿಯನ್ನು ನಿಖರವಾಗಿ ಹೊಡೆಯಲಾಗಿದೆ ಎಂದು ಹೇಳಿದೆ.

ತೈವಾನ್‌ನ ರಕ್ಷಣಾ ಸಚಿವಾಲಯದ ಮೂಲವನ್ನು ಉಲ್ಲೇಖಿಸಿರುವ ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಚೀನಾವು ಹಲವಾರು ಡಾಂಗ್‌ಫೆಂಗ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತೈವಾನ್‌ನ ಈಶಾನ್ಯ ಮತ್ತು ನೈಋತ್ಯ ಕರಾವಳಿಯ ಸುತ್ತಮುತ್ತಲಿನ ನೀರಿನಲ್ಲಿ ಉಡಾವಣೆ ಮಾಡಿದೆ.

ಡಾಂಗ್‌ಫೆಂಗ್ ಕ್ಷಿಪಣಿಗಳು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ನಿರ್ವಹಿಸಲ್ಪಡುತ್ತವೆ.

ತೈವಾನ್‌ನ ರಕ್ಷಣಾ ಸಚಿವಾಲಯವು ಉಡಾವಣೆಗೆ ಪ್ರತಿಕ್ರಿಯೆಯಾಗಿ ಸಂಬಂಧಿತ ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ, ಪ್ರಾದೇಶಿಕ ಶಾಂತಿಯನ್ನು ನಾಶಪಡಿಸಿದ ಚೀನಾದ ಕುಚೇಷ್ಟೇಯ ಕ್ರಮವನ್ನು ಅದು ಖಂಡಿಸಿದೆ ಎಂದು ರಾಯಿಟರ್ಸ್ ಹೇಳಿದೆ.

ನಾನ್ಸಿ ತೈವಾನ್‌ಗೆ ಭೇಟಿ ನೀಡಿದ ನಂತರ ಪ್ರಮುಖ ಅಂತರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ತೈವಾನ್ ಅನ್ನು ಸುತ್ತುವರೆದು ಚೀನಾ ಅತಿದೊಡ್ಡ ಮಿಲಿಟರಿ ವ್ಯಾಯಾಮವನ್ನು ಪ್ರಾರಂಭಿಸಿದೆ.

ಸ್ವ-ಆಡಳಿತ ಹೊಂದಿರುವ ತೈವಾನ್ ಭೂಪ್ರದೇಶವನ್ನು ತನ್ನದು ಎಂದು ಪರಿಗಣಿಸುವ ಚೀನಾದ ಕಟು ಬೆದರಿಕೆಗಳನ್ನು ಧಿಕ್ಕರಿಸಿ ನ್ಯಾನ್ಸಿ ಪೆಲೋಸಿ ತೈವಾನ್‌ ಪ್ರವಾಸ ಮುಗಿಸಿ ಬುಧವಾರ ಅಲ್ಲಿಂದ ನಿರ್ಗಮಿಸಿದ್ದಾರೆ.

ಪೆಲೋಸಿ ಅವರು 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅತ್ಯುನ್ನತ ಹುದ್ದೆಯ ಚುನಾಯಿತ ಯುಎಸ್ ಅಧಿಕಾರಿಯಾಗಿದ್ದಾರೆ.

ಈ ಕ್ರಮಕ್ಕೆ ಅಮೆರಿಕಾಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಚೀನಾ ಪ್ರತಿಜ್ಞೆ ಮಾಡಿದೆ. ಪ್ರಜಾಪ್ರಭುತ್ವವಾದಿ ತೈವಾನ್‌ ಅನ್ನು ಎಂದಿಗೂ ಒಬ್ಬಂಟಿ ಮಾಡುವುದಿಲ್ಲ ಎಂದು ಅಮೆರಿಕಾ ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top