News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿವೋ ಸಂಸ್ಥೆಯಿಂದ 2,217 ಕೋಟಿ ರೂ ಕಸ್ಟಮ್ಸ್ ಸುಂಕ ವಂಚನೆ

ನವದೆಹಲಿ: ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಸುಮಾರು 2,217 ಕೋಟಿ ರೂಪಾಯಿಗಳ ಕಸ್ಟಮ್ಸ್ ಸುಂಕ ವಂಚನೆ ಮಾಡಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಪತ್ತೆ ಮಾಡಿದೆ.

ವಿವೋ ಇಂಡಿಯಾ ಚೀನಾದಲ್ಲಿರುವ ವಿವೋ ಕಮ್ಯುನಿಕೇಷನ್ ಟೆಕ್ನಾಲಜಿ ಕಂಪನಿಯ ಅಂಗಸಂಸ್ಥೆಯಾಗಿದೆ. ಇದು ಉತ್ಪಾದನೆ, ಜೋಡಣೆ, ಸಗಟು ವ್ಯಾಪಾರದ ಜೊತೆಗೆ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಪರಿಕರಗಳನ್ನು ವಿತರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.

ತನಿಖೆಯ ಸಮಯದಲ್ಲಿ, ಕಂಪನಿಯ ಕಾರ್ಖಾನೆ ಆವರಣದಲ್ಲಿ ಏಜೆನ್ಸಿ ಶೋಧ ನಡೆಸಿದ್ದು, ಹಲವು ಅಕ್ರಮ ದಾಖಲೆ ಮತ್ತು ಸಾಕ್ಷ್ಯವನ್ನು ವಶಪಡಿಸಿಕೊಂಡಿದೆ. ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ಬಳಸಲು ಆಮದು ಮಾಡಿಕೊಳ್ಳಲಾದ ಕೆಲವು ವಸ್ತುಗಳ ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಘೋಷಣೆಯನ್ನು ಮಾಡಲಾಗಿರುವುದು ತಿಳಿದು ಬಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಇತ್ತೀಚೆಗೆ, ಕಂದಾಯ ಗುಪ್ತಚರ ನಿರ್ದೇಶನಾಲಯ ನಡೆಸಿದ ಮತ್ತೊಂದು ತನಿಖೆಯಲ್ಲಿ, ಒಪ್ಪೊ ಸಂಸ್ಥೆಯ ವಂಚನೆ ಬಹಿರಂಗವಾಗಿ 4,403.88 ಕೋಟಿ ರೂಪಾಯಿಗಳ ಸುಂಕದ ಬೇಡಿಕೆಯ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top