News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಮನ್ವೆಲ್ತ್‌ ಗೇಮ್ಸ್‌: 6ನೇ ದಿನ 1 ಬೆಳ್ಳಿ, 4 ಕಂಚು ಗೆದ್ದ ಭಾರತ

ನವದೆಹಲಿ: ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಸಾಧನೆ ಮುಂದುವರೆದಿದೆ.  6ನೇ ದಿನ ಭಾರತ 5 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ. ಪ್ರಸ್ತುತ ಭಾರತದ ಒಟ್ಟು ಪದಕಗಳ ಸಂಖ್ಯೆ 18 ಕ್ಕೆ ಏರಿದೆ. ಇದರಲ್ಲಿ5 ಚಿನ್ನ, 6 ಬೆಳ್ಳಿ ಮತ್ತು 7 ಕಂಚು.

ತೇಜಸ್ವಿನ್ ಶಂಕರ್ ಹೈ ಜಂಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಭಾರತಕ್ಕೆ  ಹೈಜಂಪ್‌ನಲ್ಲಿ ಪದಕ ದೊರೆತಿರುವುದು ಇತಿಹಾಸದಲ್ಲಿ ಇದೇ ಮೊದಲು.

ಮಹಿಳೆಯರ 78 ಕೆಜಿ ಜುಡೋ ವಿಭಾಗದಲ್ಲಿ ಜುಡೋಕಾ ತುಲಿಕಾ ಮಾನ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಜೂಡೋದಲ್ಲಿ ಭಾರತಕ್ಕೆ ಇದು ಮೂರನೇ ಪದಕವಾಗಿದೆ.

ಏಸ್ ಇಂಡಿಯಾ ಸ್ಕ್ವಾಷ್ ತಾರೆ ಸೌರವ್ ಘೋಸಲ್ ಅವರು ಕಂಚು ಗೆದ್ದರು.

ಕುಸ್ತಿಪಟುಗಳಾದ ಲವ್‌ಪ್ರೀತ್ ಸಿಂಗ್ ಮತ್ತು ಗುರುದೀಪ್ ಸಿಂಗ್ ಅವರು  ಕಂಚಿನ ಪದಕಗಳನ್ನು ಪಡೆದರು.

ಭಾರತ ಮಹಿಳಾ ಹಾಕಿ ಕೆನಡಾವನ್ನು 4-3 ಗೋಲುಗಳಿಂದ ಸೋಲಿಸಿ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದರು. ಪುರುಷರ ಹಾಕಿ ತಂಡವು ಗುಂಪು ಹಂತದ ಟೈನಲ್ಲಿ ಕೆನಡಾವನ್ನು 8-0 ಗೋಲುಗಳಿಂದ ಸಂಪೂರ್ಣವಾಗಿ ಸೋಲಿಸಿತು.

ಕ್ರಿಕೆಟ್‌ನಲ್ಲಿ, ಭಾರತೀಯ ಮಹಿಳೆಯರು ಬಾರ್ಬಡೋಸ್‌ನಲ್ಲಿ 100 ರನ್‌ಗಳ ಜಯದೊಂದಿಗೆ ಸೆಮಿಸ್‌ಗೆ ಸ್ಥಾನ ಪಡೆದರು.

ಭಾರತದ ನಾಲ್ವರು ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ನಿತು ಗಂಗಾಸ್ (48 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ) ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ ಪಂದ್ಯಗಳನ್ನು ಪ್ರವೇಶಿಸಿ ಭಾರತಕ್ಕೆ ಪದಕಗಳನ್ನು ಖಚಿತಪಡಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top