News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೈವಾನ್‌ ಭೇಟಿಯಲ್ಲಿ ಯುಎಸ್‌ ಸ್ಪೀಕರ್: ಎಚ್ಚರಿಕೆ ರವಾನಿಸಿದ ಚೀನಾ

ತೈಪೆ: ಚೀನಾದ 20ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳು ಮಂಗಳವಾರ ತೈವಾನ್‌ನ ವಾಯು ರಕ್ಷಣಾ ವಲಯಕ್ಕೆ ಹಾರಿದವು ಎಂದು ತೈಪೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡಿದ ಬಳಿಕ ಈ ಘಟನೆ ನಡೆದಿದೆ. ತೈವಾನ್ ಅನ್ನು ಚೀನಾ ತನ್ನ ಭೂಪ್ರದೇಶ ಎಂದು ಪರಿಗಣಿಸುತ್ತದೆ. ಇಲ್ಲಿಗೆ ಅಮೆರಿಕದ ವಕ್ತಾರರ ಭೇಟಿ ಚೀನಾ ಕೆಂಗಣ್ಣಿಗೆ ಗುರಿಯಾಗಿದೆ.

ನಾನ್ಸಿ ಪೆಲೋಸಿ ಅವರು ನಿನ್ನೆ ಸಂಜೆ ತೈವಾನ್ ನಲ್ಲಿ ಬಂದಿಳಿದಿದ್ದಾರೆ.‌ ಅವರ ಭೇಟಿಯನ್ನು ಚೀನಾ ವಿರೋಧಿಸುತ್ತಲೇ ಬಂದಿತ್ತು ಮತ್ತು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅಮೆರಿಕಾಗಿ ನೀಡಿದೆ.

ಅಲ್ಲದೇ ತೈವಾನ್‌ ವಿರುದ್ಧ ಚೀನಾ ವ್ಯಾಪಾರ ನಿರ್ಬಂಧವನ್ನು ಘೋಷಿಸಿದೆ.

ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡುತ್ತಿರುವ ಅಮೆರಿಕದ ಎರಡನೇ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಈಕೆ ಆಗಿದ್ದಾರೆ. 82 ವರ್ಷದ ಇವರು ಯುಎಸ್ ಮಿಲಿಟರಿ ವಿಮಾನದಲ್ಲಿ ತೈಪೇ ಸಾಂಗ್‌ಶನ್ ಏರ್ಪೋರ್ಟ್ ನಲ್ಲಿ ವಿದೇಶಾಂಗ ಸಚಿವ ಜೋಸೆಫ್ ವು ಅವರೊಂದಿಗೆ ಬಂದಿಳಿಯುತ್ತಿರುವುದನ್ನು ಮತ್ತು ಅವರನ್ನು ತೈಪೇ ಅಧಿಕಾರಿಗಳು ಸ್ವಾಗತಿಸುತ್ತಿರುವುದನ್ನು ನೇರ ಪ್ರಸಾರ ಮಾಡಲಾಗಿದೆ.

“ತೈವಾನ್‌ಗೆ ನಮ್ಮ ಅಧಿಕಾರಿಗಳ ಭೇಟಿ ತೈವಾನಿನ ಪ್ರಜಾಪ್ರಭುತ್ವದ ಬಗ್ಗೆ ಇರುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ” ಎಂದು ನಾನ್ಸಿ ಅವರು ಬಂದಿಳಿದ ಬಳಿಕ ಹೇಳಿಕೆ ನೀಡಿದ್ದಾರೆ.

ಇವರ ಭೇಟೆಯಿಂದ ಕೊತಕೊತ ಕುದಿಯುತ್ತಿರುವ ಚೀನಾ, ನಮ್ಮ ಮಿಲಿಟರಿ ಹೈ ಅಲರ್ಟ್ ನಲ್ಲಿ ಇದೆ. ಈ ಭೇಟಿಗೆ ಪ್ರತಿಕ್ರಿಯೆಯಾಗಿ ಸರಣಿ ಮಿಲಿಟರಿ ಕ್ರಮಗಳನ್ನು ನಡೆಸುತ್ತೇವೆ ಎಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top