News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ 3829 ಕೋಟಿ ಬಂಡವಾಳ ಹೂಡಿಕೆಯ 61ಯೋಜನೆಗೆ ರಾಜ್ಯ ಸರ್ಕಾರ ಅಸ್ತು

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಹರಿಸುತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ರೂ 3829.46 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 61ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ 133ನೇ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಒಟ್ಟು 61 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ರೂ 3829. 46 ಕೋಟಿ ಮೊತ್ತದ ಹೂಡಿಕೆ ಮಾಡುವುದರಿಂದ ರಾಜ್ಯದಲ್ಲಿ ಸುಮಾರು 19150 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಚಿವ ಮುರುಗೇಶ್ ಆರ್ ನಿರಾಣಿ ಅವರು ತಿಳಿಸಿದ್ದಾರೆ.

ರೂ 50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ ಒಟ್ಟು 13 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಇದರಿಂದ ಅಂದಾಜು ₹2979.35 ಕೋಟಿ ಹೂಡಿಕೆಯಾಗಿ 16158 ಉದ್ಯೋಗ ಸೃಜನೆಯಾಗಲಿವೆ ಎಂದು ಹೇಳಿದರು.

ಉದ್ಯಮಿಗಳ ಆಕರ್ಷಣೆ , ಕೈಗಾರಿಕೆಗಳ ಪುನಶ್ಚೇತನ, ಬಂಡವಾಳ ಹೂಡಿಕೆ ಮಾಡುವವರಿಗೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿದೆ ಎಂದಿದ್ದಾರೆ.

ಅನುಮೋದನೆ ನೀಡಿರುವ ಯೋಜನೆಗಳು

ಟೊಯೋಟಾ ಕಿರ್ಲೋಸ್ಕರ್ ಆಟೋ ಪಾಟ್ಸ್೯ ₹445 ಕೋಟಿಹೂಡಿಕೆ, 1198 ಉದ್ಯೋಗ ಸೃಷ್ಟಿ

ಮೈಕ್ರಾನ್ ಟೆಕ್ನಾಲಜಿ ಆಪರೇಷನ್ ಇಂಡಿಯಾ ಎಲ್ ಎಲ್ ಪಿ.
₹397 ಕೋಟಿ ಹೂಡಿಕೆ ಹಾಗೂ 797 ಉದ್ಯೋಗ

ಸೀತರಾಮಂ ಇಸ್ಟಾಟ್ ಪ್ರೈ. ಲಿ. ₹376 ಕೋಟಿ ಹೂಡಿಕೆ. 400 ಉದ್ಯೋಗ

ಜಿಂದಾಲ್ ಇಂಡಸ್ಟ್ರೀಸ್ ಹೀಸಾರ್ ಪ್ರೈ. ಲಿ, ₹340 ಕೋಟಿ ಹೂಡಿಕೆ, 310 ಉದ್ಯೋಗ

ಸೂರಾಜ್ ಆಗ್ರೋ ಡಿಸ್ಡೀಲಿಸ್ ಲಿ ₹185 ಕೋಟಿ ಹೂಡಿಕೆ,
170 ಉದ್ಯೋಗ

ನಹಾರಾಸ್ ಎಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ ₹120 ಕೋಟಿ ಹೂಡಿಕೆ, 353 ಉದ್ಯೋಗ

ಶ್ರೀ ಬ್ರಮ್ಮೇಶ್ವರಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮಾಗೂರ್, ₹112 ಕೋಟಿ ಹೂಡಿಕೆ, 80 ಉದ್ಯೋಗ

ಲೂಜಾನ್ ಫಾರ್ಮಾ ಪ್ರೈ‌.ಲಿ. ₹97.50 ಕೋಟಿ ಹೂಡಿಕೆ,
246 ಉದ್ಯೋಗ

ಎನ್.ಎಸ್.ಪಿ. ಡಿಸ್ಟಿಲರಿ ಪ್ರೈ.ಲಿ ₹64.64 ಕೋಟಿ ಹೂಡಿಕೆ,
116 ಉದ್ಯೋಗ

ಸ್ಟ್ರೀಂಗ್ ಬಯೋ ಪ್ರೈ. ಲಿ ₹75 ಕೋಟಿ, 48 ಉದ್ಯೋಗ

ಋಷಿಲ್ ಡೆಕೋರ್ ಲಿ ₹72.76 ಕೋಟಿ ಹೂಡಿಕೆ, 310 ಉದ್ಯೋಗ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top