News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಇಂದು ಅಂತಾರಾಷ್ಟ್ರೀಯ ಹುಲಿ ದಿನʼ: ಹುಲಿ ಸಂರಕ್ಷಣೆಗೆ ಬೇಕಿದೆ ಗಮನ

ನವದೆಹಲಿ: ಹುಲಿ ಎಂದರೆ ಗಂಭೀರತೆ, ಕ್ರೂರತನ, ಅದ್ಭುತ ಬೇಟೆಗಾರ. ಹುಲಿ ಅರಣ್ಯದ ಅಂದವನ್ನು ಹೆಚ್ಚಿಸುವ ಬೆಕ್ಕುಗಳ ಜಾತಿಗೆ ಸೇರಿದೆ ಸುಂದರ ಕಾಯದ ಆಕರ್ಷಕ ಬಣ್ಣದ ವ್ಯಾಘ್ರ. ಇಂತಹ ಹುಲಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ ಅರಣ್ಯಗಳ ಸಮತೋಲವನ್ನು ಕಾಪಾಡುವಂತೆ ಮಾಡುವ ಸಲುವಾಗಿಯೇ ಪ್ರತಿ ವರ್ಷ ಜೂನ್‌ 29 ಅನ್ನು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಣೆ ಮಾಡಲಾಗುತ್ತದೆ.

ಜುಲೈ 29 ರಂದು ಅಂತರರಾಷ್ಟ್ರೀಯ ಹುಲಿ ದಿನವನ್ನು ಆಚರಿಸುವುದು ಯಾಕೆಂದರೆ 2010 ರಲ್ಲಿ ಇದೇ ದಿನದಂದು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್‌ನಲ್ಲಿ ಅಂತರರಾಷ್ಟ್ರೀಯ ಹುಲಿ ಅಮಿಟ್ ನಡೆದಿತ್ತು.

ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಕಳೆದ 150 ವರ್ಷಗಳಲ್ಲಿ ಹುಲಿಗಳ ಜನಸಂಖ್ಯೆಯು ಸರಿಸುಮಾರು 95 ಪ್ರತಿಶತದಷ್ಟು ಕಡಿಮೆಯಾಗಿದೆ. ಹೀಗಾಗಿ ಹುಲಿಗಳನ್ನು ಉಳಿಸಲು ಕಾರ್ಯೋನ್ಮುಖವಾಗುವಂತೆ ಎಲ್ಲದನ್ನೂ ಪ್ರೋತ್ಸಾಹಿಸುವ ಗುರಿಯನ್ನು ಈ ದಿನ ಹೊಂದಿದೆ.

ವಿಶ್ವ ವನ್ಯಜೀವಿ ನಿಧಿಯ ಪ್ರಕಾರ ಪ್ರಸ್ತುತ ವಿಶ್ವದಲ್ಲಿ ಕೇವಲ 3,900 ಹುಲಿಗಳು ಮಾತ್ರ ಇವೆ. ಇನ್ನು ವಿಶ್ವದಲ್ಲಿ ಈಗಿರುವ ಒಟ್ಟು ಹುಲಿಗಳ ಪೈಕಿ ಸುಮಾರು ಶೇ 70 ರಷ್ಟು ಭಾರತದಲ್ಲೇ ಇದೆ ಎಂಬುದು ವಿಶೇಷ.

ಅಕ್ರಮ ಬೇಟೆ, ವನ್ಯಜೀವಿ ವ್ಯಾಪಾರ, ಮಾನವ-ವನ್ಯಜೀವಿ ಸಂಘರ್ಷ ಮತ್ತು ಹುಲಿಗಳ ಆವಾಸಸ್ಥಾನಗಳನ್ನು ಹಾಳು ಮಾಡುವುದರ ವಿರುದ್ಧ ಎಲ್ಲ ದೇಶಗಳು ಕ್ರಮ ಕೈಗೊಂಡರೆ ನಾವು ಪ್ರಕೃತಿಯ ಅಪರೂಪದ ಕೊಡುಗೆ ಹುಲಿಗಳನ್ನು ಅಳಿವಿನಿಂದ ಪಾರು ಮಾಡಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top