ಭೋಪಾಲ್: ಇಂಗ್ಲೀಷ್ ಸೋಶಲ್ ಮೀಡಿಯಾ ವೇದಿಕೆಯಾದ ಟ್ವಿಟರ್ನ ಮಾದರಿಯಲ್ಲೇ ಹಿಂದಿ ನೆಟ್ವರ್ಕಿಂಗ್ ಸೈಟ್ಗೆ ಚಾಲನೆ ದೊರೆತಿದೆ, ಈ ಸೈಟ್ಗೆ ‘ಮೂಷಕ್’ ಎಂದು ಹೆಸರಿಡಲಾಗಿದೆ.
ಭೋಪಾಲ್ನಲ್ಲಿ ಸೆ.10 ರಿಂದ ವಿಶ್ವ ಹಿಂದಿ ಕಾನ್ಫರೆನ್ಸ್ ನಡೆಯಲಿದ್ದು, ಅದರ ಅಂಗವಾಗಿ ‘ಮೂಷಕ್’ಗೆ ಚಾಲನೆ ನೀಡಲಾಗಿದೆ.
ಟ್ವಿಟರ್ನಲ್ಲಿ 140 ಶಬ್ದಗಳನ್ನು ಮಾತ್ರ ಬಳಸಬಹುದು, ಆದರೆ ಮೂಷಕ್ನಲ್ಲಿ 500 ಶಬ್ದಗಳನ್ನು ಬಳಸುವ ಅವಕಾಶವಿದೆ ಎಂದು ಈ ಹಿಂದಿ ನೆಟ್ವರ್ಕಿಂಗ್ ಸೈಟ್ನ ಮುಖ್ಯಸ್ಥ ಅನುರಾಗ್ ಗೌಡ್ ತಿಳಿಸಿದ್ದಾರೆ.
ಸ್ಮಾರ್ಟ್ಫೋನ್ಗಳಲ್ಲಿ ಇದು ಲಭ್ಯವಾಗಲಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಅಥವಾ ಮೂಷಕ್ ಹೆಸರಿನ ವೆಬ್ಸೈಟ್ಗೆ ಹೋಗಿ ಅಲ್ಲಿಂದ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಮಧ್ಯಪ್ರದೇಶ ಸರ್ಕಾರದ ಸಹಕಾರದೊಂದಿಗೆ ವಿದೇಶಾಂಗ ಸಚಿವಾಲಯ 3 ದಿನಗಳ ವರ್ಲ್ಡ್ ಹಿಂದಿ ಕಾನ್ಫರೆನ್ಸ್ನ್ನು ಆಯೋಜನೆ ಮಾಡುತ್ತಿದೆ, ನಾಳೆಯಿಂದ ಇದು ಆರಂಭಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.