News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

25 ಎ ದರ್ಜೆ ದೇಗುಲಗಳನ್ನು ಶೂನ್ಯ ತ್ಯಾಜ್ಯ ದೇಗುಲಗಳನ್ನಾಗಿಸುವ ಗುರಿ

ಬೆಂಗಳೂರು: ಸ್ವಚ್ಛತಾ ಕಾರ್ಯ ದೇವರ ಸೇವೆಗೆ ಸಮಾನ ಎನ್ನುವ ಮಾತಿದೆ. ಅದರಂತೆ ಮುಂದಿನ ಐದು ತಿಂಗಳಲ್ಲಿ 25 ಎ ದರ್ಜೆಯ ದೇವಸ್ಥಾನಗಳನ್ನು ಶೂನ್ಯ ತ್ಯಾಜ್ಯ ಎಂದು ಘೋಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಾರ್ಯೋನ್ಮುಖವಾಗಿದೆ.

ಸ್ವಚ್ಛ ಮಂದಿರ ಅಭಿಯಾನದ  ಅಡಿಯಲ್ಲಿ ದೇವಾಲಯದ ಆವರಣದೊಳಗೆ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮತ್ತು ಪ್ರತಿದಿನ ದೇವಾಲಯಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ವ್ಯವಸ್ಥೆಗಳನ್ನು ರೂಪಿಸುತ್ತಿದೆ.

ಸ್ವಚ್ಛ ಮಂದಿರ ಪರಿಕಲ್ಪನೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಲಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆ (ಮುಜರಾಯಿ ಇಲಾಖೆ) ಅಡಿಯಲ್ಲಿ 34,000 ದೇವಾಲಯಗಳಲ್ಲಿ 201 ಎ-ಗ್ರೇಡ್ ದೇವಾಲಯಗಳಿವೆ.

ಈ ಯೋಜನೆ ಡಿಸೆಂಬರ್ ಅಂತ್ಯದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಕೆಲವು ದೇವಸ್ಥಾನಗಳೆಂದರೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಉಡುಪಿಯ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ ಮತ್ತು ಶ್ರೀ ಸೌಂದತ್ತಿ ಯಲ್ಲಮ್ಮ ದೇವಸ್ಥಾನಗಳಲ್ಲಿ ಇದು ಮೊದಲು ಆರಂಭವಾಗುವ ನಿರೀಕ್ಷೆ ಇದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top