News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ ಎಂದ ರಿಷಿ ಸುನಕ್‌

ಲಂಡನ್: ಯುಕೆಯ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್‌ ಅವರು ಚೀನಾ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಚೀನಾ ಬ್ರಿಟನ್ ಸೇರಿದಂತೆ ವಿಶ್ವದ ಸುರಕ್ಷತೆಗೆ ಬಹುದೊಡ್ಡ ಬೆದರಿಕೆ ಎಂದು ಅವರು ಕರೆದಿದ್ದಾರೆ.

ತಾನು ಮುಂದಿನ ಬ್ರಿಟನ್ ಪ್ರಧಾನಿಯಾದ ಬಳಿಕ ಚೀನಾ ವಿರುದ್ಧ ಕಠಿಣ ನಿಲುವು ತಳೆಯುತ್ತೇನೆ ಎಂದೂ ಅವರು ತಿಳಿಸಿದ್ದಾರೆ.

ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನ ಹೊಂದಿರುವ ಏಕೈಕ ನಾಯಕ ರಿಷಿ ಸುನಕ್ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ​ ಹೊಗಳಿತ್ತು. ಇದನ್ನು ಮುಂದಿಟ್ಟುಕೊಂಡು ಇನ್ನೊಬ್ಬ ಅಭ್ಯರ್ಥಿ  ಲಿಜ್ ಟ್ರಸ್  ರಿಷಿ ಸುನಕ್ ಚೀನಾ ಹಾಗೂ ರಷ್ಯಾ ಬಗ್ಗೆ ಮೃದು ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಸುನಕ್‌ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಿಟನ್​ನಲ್ಲಿ ಇರುವ 30 ಕನ್ಫೂಷಿಯಸ್ ಇನ್​ಸ್ಟಿಟ್ಯೂಟ್​ಗಳನ್ನು ಮುಚ್ಚುವುದು ಮತ್ತು ಆ ಮೂಲಕ ಬ್ರಿಟನ್​ನಲ್ಲಿ ಚೀನಾ ಸಂಸ್ಕೃತಿ ಹಾಗೂ ಭಾಷಾ ಕಾರ್ಯಕ್ರಮಗಳ ಮೂಲಕ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದನ್ನು ತಡೆಗಟ್ಟುವ ಪ್ರಸ್ತಾವನೆಗಳನ್ನು ಸುನಕ್ ಮುಂದಿಟ್ಟಿದ್ದಾರೆ. ಚೀನಾ ಕಮ್ಯುನಿಸ್ಟ್ ಪಾರ್ಟಿಯನ್ನು ಬ್ರಿಟನ್​ನ ವಿಶ್ವವಿದ್ಯಾಲಯಗಳಿಂದ ಹೊರಗಿಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದಕ್ಕಾಗಿ 60 ಸಾವಿರ ಡಾಲರ್​ ಮೊತ್ತದ ವಿದೇಶಿ ಫಂಡಿಂಗ್ ಮತ್ತು ಸಂಶೋಧನಾ ಒಡಂಬಡಿಕೆಗಳ ಬಗೆಗಿನ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ಬಹಿರಂಗಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಚೀನಾದ ಬೇಹುಗಾರಿಕೆಯನ್ನು ತಡೆಗಟ್ಟಲು ಬ್ರಿಟನ್​ನ ಆಂತರಿಕ ಗುಪ್ತಚರ ಸಂಸ್ಥೆ MI5 ನೆರವು ಪಡೆಯುವುದು, ಸೈಬರ್​ ಕ್ಷೇತ್ರದಲ್ಲಿ ಚೀನಾದಿಂದ ಸಂಭಾವ್ಯ ದಾಳಿಗಳನ್ನು ಎದುರಿಸಲು ನ್ಯಾಟೊ ಮಾದರಿಯ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ ಸ್ಥಾಪಿಸುವುದು, ರಕ್ಷಣಾ ದೃಷ್ಟಿಯಿಂದ ಸೂಕ್ಷ್ಮ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಬ್ರಿಟನ್​ನ ಪ್ರಮುಖ ಸಂಸ್ಥೆಗಳನ್ನು ಚೀನಾ ವಶಪಡಿಸಿಕೊಳ್ಳುವುದನ್ನು ತಡೆಗಟ್ಟುವುದು ಇವೇ ಮುಂತಾದ ಕ್ರಮಗಳನ್ನು ತಾವು ಕೈಗೊಳ್ಳುವುದಾಗಿ ಸುನಕ್ ಇಂಗಿತ ವ್ಯಕ್ತಪಡಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top