News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಛತ್ತೀಸ್‌ಗಢದಂತೆ ಕರ್ನಾಟಕ ಸರ್ಕಾರವೂ ಖರೀದಿಸಲಿದೆ ಗೋಮೂತ್ರ

ಬೆಂಗಳೂರು: ಛತ್ತೀಸ್‌ಗಢ ಸರ್ಕಾರದ ಮಾದರಿಯಂತೆ ಕರ್ನಾಟಕದ ಪಶುಸಂಗೋಪನಾ ಇಲಾಖೆಯು ಕೂಡ ಹೈನುಗಾರರಿಂದ ಗೋಮೂತ್ರವನ್ನು ಖರೀದಿ ಮಾಡಲು ಮುಂದಾಗಿದೆ.  ರೈತರಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯಕವಾಗುವಂತೆ  ಗೋಮೂತ್ರವನ್ನು ಖರೀದಿಸಲು ಯೋಜಿಸುತ್ತಿದೆ.

ಆರಂಭದಲ್ಲಿ, ಇಲಾಖೆಯು ಉದ್ದೇಶಿತ ಗೋಶಾಲೆಗಳಿಂದ ಗೋಮೂತ್ರವನ್ನು ಖರೀದಿ ಮಾಡಲಿದೆ. ಗೋಮೂತ್ರ ಮತ್ತು ಸಗಣಿ ಬಳಸಿ ಉದ್ಯೋಗ ಸೃಷ್ಟಿಸುವ ವಿವಿಧ ಉತ್ಪನ್ನಗಳನ್ನು ತಯಾರಿಸಲು ಅದು ಯೋಜಿಸಿದೆ.

ಪ್ರಸ್ತುತ ಕೆಲವು ಖಾಸಗಿ ಗೋಶಾಲೆಗಳಿಗೆ ಅನುದಾನ ನೀಡುತ್ತಿರುವ ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಕನಿಷ್ಠ 100 ಗೋಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಅವುಗಳಲ್ಲಿ ಕೆಲವು ಈಗಾಗಲೇ ಪ್ರಾರಂಭವಾಗಿವೆ. ಇಲಾಖೆಯು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳಿಗಾಗಿ ಭೂಮಿಯನ್ನು ಗುರುತಿಸಿದ್ದು, ಗೋವುಗಳನ್ನು ಮೇಯಿಸಲು ಗೋಮಾಳಗಳನ್ನು ಸಹ ಹೊಂದಿದೆ. ಅದನ್ನು ಮುಂದಕ್ಕೆ ಕೊಂಡೊಯ್ದು ಸರ್ಕಾರ ಈಗ ರೈತರಿಗೆ ಲಾಭ ತಂದುಕೊಡುವ ಕಾಯಕ ಮಾಡಲು ಮುಂದಾಗಿದೆ.

ಇತ್ತೀಚೆಗೆ ಛತ್ತೀಸ್‌ಗಢ ಸರ್ಕಾರವು ಜಾನುವಾರುಗಳನ್ನು ಸಾಕುತ್ತಿರುವ ರೈತರಿಂದ ಗೋಮೂತ್ರವನ್ನು ಲೀಟರ್‌ಗೆ 4 ರೂ.ಗೆ ಮತ್ತು ಹಸುವಿನ ಸಗಣಿ ಕೆಜಿಗೆ 2 ರೂ.ಗೆ ಖರೀದಿಸಲು ನಿರ್ಧರಿಸಿದೆ. ಅದೇ ಮಾದರಿಯನ್ನು ಕರ್ನಾಟಕ ಸರ್ಕಾರ ಪಾಲಿಸಲಿದೆ.

ಈ ಬಗ್ಗೆ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಪ್ರಸ್ತುತ  ಗೋಶಾಲೆಗಳಂತಹ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರೋತ್ಥಾನ ಪರಿಷತ್ತು ಸೇರಿದಂತೆ ಹಲವು ಖಾಸಗಿ ಮಠಗಳು ಮತ್ತು ಸಂಸ್ಥೆಗಳು ಗೋಮೂತ್ರ ಮತ್ತು ಗೋಮಯವನ್ನು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುತ್ತಿವೆ, ಇದರಲ್ಲಿ ಜೈವಿಕ ಅನಿಲ, ಡೈಗಳು, ಶಾಂಪೂಗಳು, ಕೀಟನಾಶಕಗಳು, ಮುಲಾಮುಗಳು ಮತ್ತು ಇನ್ನೂ ಅನೇಕವು ಸೇರಿವೆ. ನಾವು ನಮ್ಮದೇ ಆದ ಗೋಶಾಲೆಗಳನ್ನು ಹೊಂದಿದ ನಂತರ, ಗೋಮೂತ್ರ ಮತ್ತು ಹಸುವಿನ ಸಗಣಿ ಎರಡನ್ನೂ ಸಂಗ್ರಹಿಸುತ್ತೇವೆ. ಹಸುವಿನ ಸಗಣಿ ಸಂಗ್ರಹಿಸಲು ಮತ್ತು ಉತ್ಪನ್ನಗಳನ್ನು ತಯಾರಿಸುವ ಘಟಕ ಸ್ಥಾಪಿಸಲು ನಮಗೆ 20 ರಿಂದ 100 ಎಕರೆ ಭೂಮಿ ಇದೆ” ಎಂದಿದ್ದಾರೆ.

ಕರ್ನಾಟಕದ ತಂಡ ಛತ್ತೀಸ್‌ಗಢ ಮಾದರಿಯನ್ನು ಅಧ್ಯಯನ ಮಾಡಲಿದೆ ಎಂದು ಸಚಿವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top