News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಕೆ ಪ್ರಧಾನಿ ರೇಸ್‌ನ ಕೊನೆ ಹಂತಕ್ಕೆ ರಿಷಿ ಸುನಕ್‌ ಮತ್ತು ಲಿಝ್‌ ಟ್ರಸ್

ಲಂಡನ್‌: ರಿಷಿ ಸುನಕ್ ಅವರು ಯುಕೆ ಪ್ರಧಾನಿಯಾಗುವ ರೇಸ್‌ನಲ್ಲಿ ಅಂತಿಮ ಹಂತಕ್ಕೆ ಬಂದು ತಲುಪಿದ್ದಾರೆ. ಅಂತಿಮ ಹಂತದಲ್ಲಿ ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರಸ್ ಅವರು ಸುನಕ್‌ ಅವರಿಗೆ ಪ್ರತಿಸ್ಪರ್ಧಿಯಾಗಿ ಉಳಿದುಕೊಂಡಿದ್ದಾರೆ.

ಯುಕೆ ಪ್ರಧಾನಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಪರ್ಧೆಯಲ್ಲಿ ಈಗ ಕೇವಲ ಇಬ್ಬರು ಅಭ್ಯರ್ಥಿಗಳಷ್ಟೇ ಇದ್ದು ಇವರ ನಡುವೆ ನೇರ ಹಣಾಹಣಿ ನಡೆಯಲಿದೆ.

ಸುನಕ್ ಅವರು ಟೋರಿ ಸಂಸದರ ಐದನೇ ಮತ್ತು ಅಂತಿಮ ಮತದಾನದ ಸುತ್ತಿನಲ್ಲಿ 137 ಮತಗಳನ್ನು ಗಳಿಸಿದ್ದಾರೆ ಆದರೆ ಎರಡನೇ ಸ್ಥಾನದಲ್ಲಿರುವ ಟ್ರಸ್ 113 ಸಂಸದರ ಬೆಂಬಲವನ್ನು ಗಳಿಸಿದ್ದಾರೆ. ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 105 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಬಂದು ರೇಸ್‌ನಿಂದ ಹೊರಬಿದ್ದಿದ್ದಾರೆ.

ಇಲ್ಲಿಯವರೆಗೆ ಪ್ರತಿ ಮತದಾನದ ಸುತ್ತಿನಲ್ಲಿ ಅಗ್ರಸ್ಥಾನದಲ್ಲಿರುವ 42 ವರ್ಷ ವಯಸ್ಸಿನ ಸುನಕ್ ಅವರು ಪ್ರಧಾನಿ ಆಗುತ್ತಾರೆ ಎಂಬುದು ಬಹುತೇಕರ ನಿರೀಕ್ಷೆ. 1 ಲಕ್ಷ 80 ಸಾವಿರ ಕನ್ಸರ್ವೇಟಿವ್ ಸದಸ್ಯರ ಮತದಾನದಲ್ಲಿ ಸುನಕ್ ಅಥವಾ ಲಿಜ್ ಟ್ರಸ್ ಅವರ ನಡುವೆ ಒಬ್ಬರನ್ನು ಪಕ್ಷದ ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ. ವಿಜೇತರನ್ನು ಸೆಪ್ಟೆಂಬರ್ 5 ರಂದು ಘೋಷಿಸಲಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top