News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನೌಷಧಿ ಕೇಂದ್ರಗಳು ನಾಗರಿಕರ 5,300 ಕೋಟಿ ರೂ ಉಳಿಸಿದೆ: ಕೇಂದ್ರ

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಜನೌಷಧಿ ಕೇಂದ್ರಗಳ ಮಾರಾಟವು 893.56 ಕೋಟಿ ರೂಪಾಯಿಗಳಷ್ಟಾಗಿದ್ದು, ನಾಗರಿಕರಿಗೆ ಅಂದಾಜು 5,300 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಮಂಗಳವಾರ ರಾಜ್ಯಸಭೆಗೆ ಕೇಂದ್ರ ತಿಳಿಸಿದೆ.

ಲಿಖಿತ ಉತ್ತರ ನೀಡಿದ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ಅವರು, ದಿನಕ್ಕೆ ಸರಾಸರಿ 4-5 ಲಕ್ಷ ಜನರು ಜನೌಷಧಿ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ ಎಂದಿದ್ದಾರೆ.

”2021-22ರ ಹಣಕಾಸು ವರ್ಷದಲ್ಲಿ 893.56 ಕೋಟಿ ರೂ.ಗಳ ಔಷಧ ಮಾರಾಟ ಮಾಡಲಾಗಿದ್ದು, ಬ್ರಾಂಡೆಡ್ ಔಷಧಿಗಳ ಬೆಲೆಗೆ ಹೋಲಿಸಿದರೆ ನಾಗರಿಕರಿಗೆ ಅಂದಾಜು 5,300 ಕೋಟಿ ರೂ.ಗಳ ಉಳಿತಾಯವಾಗಿದೆ” ಎಂದು ಸಚಿವರು ಹೇಳಿದರು.

ಜೂನ್ 30, 2022 ರಂತೆ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಅಡಿಯಲ್ಲಿ ದೇಶದಾದ್ಯಂತ ಸುಮಾರು 8,742 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (PMBJKs) ತೆರೆಯಲಾಗಿದೆ.

PMBJP ಅಡಿಯಲ್ಲಿ ಲಭ್ಯವಿರುವ ಜೆನೆರಿಕ್ ಔಷಧಿಗಳು ಬ್ರ್ಯಾಂಡೆಡ್ ಔಷಧಿಗಳಿಗಿಂತ ಸುಮಾರು 50- 90 ಪ್ರತಿಶತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top