News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2009ಕ್ಕೆ ಹೋಲಿಸಿದರೆ 2021ರಲ್ಲಿ ಎಡಪಂಥೀಯ ಉಗ್ರವಾದ 77% ಇಳಿಕೆ

ನವದೆಹಲಿ: ಎಡಪಂಥೀಯ ಹಿಂಸಾಚಾರದ ಘಟನೆಗಳು 2009 ರಲ್ಲಿ ಇದ್ದ ಸಾರ್ವಕಾಲಿಕ ಗರಿಷ್ಠ 2,258 ರಿಂದ 2021 ರಲ್ಲಿ 509 ಕ್ಕೆ 77% ರಷ್ಟು ಕಡಿಮೆಯಾಗಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಎಡಪಂಥೀಯ ಉಗ್ರವಾದದ ಕುರಿತು ಮಾತನಾಡಿದ ಅವರು,  “ಎಡಪಂಥೀಯ ಉಗ್ರವಾದವನ್ನು ಪರಿಹರಿಸಲು 2015 ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯ ಸಮರ್ಪಕ ಅನುಷ್ಠಾನದಿಂದ ನಕ್ಸಲ್ ಹಿಂಸಾಚಾರದಲ್ಲಿ ಸ್ಥಿರವಾದ ಇಳಿಕೆಗೆ ಕಂಡಿದೆ” ಎಂದು ಹೇಳಿದ್ದಾರೆ.

“‌ಎಡಪಂಥೀಯ ಹಿಂಸಾಚಾರದ ಘಟನೆಗಳು ಶೇ. 77 ರಷ್ಟು ಕಡಿಮೆಯಾಗಿದೆ. 2009 ರಲ್ಲಿ ಸಾರ್ವಕಾಲಿಕ ಗರಿಷ್ಠ 2,258 ರಿಂದ 2021 ರಲ್ಲಿ 509 ಕ್ಕೆ ಇಳಿದಿದೆ. ಹಾಗೆಯೇ ನಾಗರಿಕರು ಮತ್ತು ಭದ್ರತಾ ಪಡೆಗಳ ಸಾವುಗಳು 2010 ರಲ್ಲಿ ಸಾರ್ವಕಾಲಿಕ ಗರಿಷ್ಠ 1,005 ರಿಂದ 2021 ರಲ್ಲಿ 147 ಕ್ಕೆ ಶೇ.85 ರಷ್ಟು ಕಡಿಮೆಯಾಗಿದೆ” ಎಂದಿದ್ದಾರೆ.

2010 ರಲ್ಲಿ 96 ಜಿಲ್ಲೆಗಳಿಗೆ ಹೋಲಿಸಿದರೆ 2021 ರಲ್ಲಿ ಕೇವಲ 46 ಜಿಲ್ಲೆಗಳು ಎಡಪಂಥೀಯ ಉಗ್ರವಾದದ ಹಿಂಸಾಚಾರವನ್ನು ವರದಿ ಮಾಡಿದ್ದರಿಂದ ಹಿಂಸಾಚಾರದ ಭೌಗೋಳಿಕ ಹರಡುವಿಕೆಯು ಕಡಿಮೆಯಾಗಿದೆ ಎಂದು ರಾಯ್‌ ಹೇಳಿ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top