News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಿಎಸ್‌ಟಿಗೆ ಒಳಪಡದ ಆಹಾರ ಧಾನ್ಯಗಳ ಪಟ್ಟಿ ನೀಡಿದ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಚಿಲ್ಲರೆ ಮಾರಾಟ ಮಾಡುವ ಮತ್ತು ಮೊದಲೇ ಪ್ಯಾಕ್ ಮಾಡದ ಅಥವಾ ಮೊದಲೇ ಲೇಬಲ್ ಮಾಡದ ಯಾವುದೇ ಜಿಎಸ್‌ಟಿಗೆ ಒಳಪಡದ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕೆಲವು ಹೊಸ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವ ಹಾಗೂ ಬೆಲೆ ಏರಿಕೆ ವಿಚಾರವಾಗಿ ವಿಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಲೋಕಸಭೆಯ ಕಲಾಪವನ್ನು ಇಂದು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಸೀತಾರಾಮನ್‌ ಅವರು ಪಟ್ಟಿ ಬಿಡುಗಡೆ ಮಾಡಿ ಪ್ರತಿಪಕ್ಷಗಳಿಗೆ ಉತ್ತರ ನೀಡಿದ್ದಾರೆ.

ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸಿರಿಧಾನ್ಯಗಳು, ಅಕ್ಕಿ, ಹಿಟ್ಟು ಮತ್ತು ಮೊಸರು ಮುಂತಾದ ಆಹಾರ ಪದಾರ್ಥಗಳ ಮೇಲೆ 5% ಜಿಎಸ್‌ಟಿ ವಿಧಿಸುವುದನ್ನು ಸಮರ್ಥಿಸಿಕೊಂಡ  ಸೀತಾರಾಮನ್, ಇದು ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರವಾಗಿದೆ ಮತ್ತು ಈ ಸಭೆಯಲ್ಲಿ ಇದರಲ್ಲಿ ಬಿಜೆಪಿಯೇತರ ರಾಜ್ಯಗಳ ಮುಖಂಡರು ಕೂಡ ಉಪಸ್ಥಿತರಿದ್ದರು ಎಂದಿದ್ದಾರೆ.

ಬೇಳೆಕಾಳುಗಳು, ಧಾನ್ಯಗಳು, ಹಿಟ್ಟು ಮುಂತಾದ ನಿರ್ದಿಷ್ಟ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುವ ವಿಧಾನವನ್ನು ಮರುಪರಿಶೀಲಿಸುವಂತೆ ಕೌನ್ಸಿಲ್ ಶಿಫಾರಸು ಮಾಡಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

 ಬೇಳೆಕಾಳುಗಳು/ದಾಲ್, ಗೋಧಿ, ಓಟ್ಸ್, ಜೋಳ, ಅಕ್ಕಿ, ಹಿಟ್ಟು, ಸೂಜಿ/ರವಾ, ಬೇಸನ್, ಮಂಡಕ್ಕಿ, ಮೊಸರು/ಲಸ್ಸಿ ಸೇರಿದಂತೆ ಕೆಲವು ವಸ್ತುಗಳನ್ನು ಸಡಿಲವಾಗಿ ಮತ್ತು ಮೊದಲೇ ಪ್ಯಾಕ್ ಮಾಡದ ಅಥವಾ ಮೊದಲೇ ಲೇಬಲ್ ಮಾಡದೆ (Non Branded) ಮಾರಾಟ ಮಾಡಿದಾಗ ಯಾವುದೇ ಜಿಎಸ್‌ಟಿಗೆ ಒಳಪಡುವುದಿಲ್ಲ  ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top