ಡೆಹ್ರಾಡೂನ್: ಸೆ.11ರಂದು ಹಿಂದೂಗಳ ಪವಿತ್ರ ಕ್ಷೇತ್ರ ಋಷಿಕೇಶಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಸ್ವಾಮಿ ದಯಾನಂದ್ ಗಿರಿಯರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲಿದ್ದಾರೆ.
ಶೀಶಮಜದಿ ಆಶ್ರಮದಲ್ಲಿ ಕೆಲವೊತ್ತು ಸ್ವಾಮೀಜಿಯೊಂದಿಗೆ ಅವರು ಕೆಲಹೊತ್ತು ಕಾಲಕಳೆಯಲಿದ್ದಾರೆ. ಬಳಿಕ ಅದೇ ದಿನ ಚಂಡೀಗಢದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೋದಿ ವೈಯಕ್ತಿವಾಗಿ ಸ್ವಾಮಿ ದಯಾನಂದ ಗಿರಿಯವರನ್ನು ಬಹು ಕಾಲದಿಂದ ಬಲ್ಲವರು. ಇದೀಗ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನಲೆಯಲ್ಲಿ ಅವರನ್ನು ನೋಡಲು ಋಷಿಕೇಶಕ್ಕೆ ತೆರಳಲಿದ್ದಾರೆ.
ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಉತ್ತರಾಖಂಡ ಭೇಟಿಯಾಗಿದೆ. 2014ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಅವರು ಅಲ್ಲಿಗೆ ತೆರಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.