News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬ್ರಿಟನ್‌ ಪ್ರಧಾನಿಯಾಗುವತ್ತ ರಿಷಿ ಸುನಕ್‌ ದಾಪುಗಾಲು: 3ನೇ ಸುತ್ತಲ್ಲೂ ಅಗ್ರಸ್ಥಾನ

ಲಂಡನ್: ಮಾಜಿ ಚಾನ್ಸೆಲರ್ ರಿಷಿ ಸುನಕ್ ಅವರು ಸೋಮವಾರ ಸಂಸತ್ತಿನ ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡುವಿನ ಮೂರನೇ ಸುತ್ತಿನ ಮತದಾನದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಬ್ರಿಟನ್‌ನ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಇರುವ ಅಭ್ಯರ್ಥಿಗಳ ಸಂಖ್ಯೆ ಈಗ ನಾಲ್ಕಕ್ಕೆ ಇಳಿಕೆಯಾಗಿದೆ. ಟಾಮ್ ತುಗೆಂಧತ್ ಕಡಿಮೆ ಮತಗಳನ್ನು ಪಡೆದು ಸ್ಪರ್ಧೆಯಿಂದ ಹೊರಗುಳಿದಿದ್ದಾರೆ.

ಮೂರನೇ ಸುತ್ತಿನ ಮತದಾನದಲ್ಲಿ ಭಾರತೀಯ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್ 115 ಮತಗಳನ್ನು ಪಡೆದರು. ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದರು. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 71 ಮತ ಮತ್ತು ಮಾಜಿ ಸಮಾನತೆ ಸಚಿವ ಕೆಮಿ ಬಡೆನೋಚ್ 58 ಮತಗಳನ್ನು ಪಡೆದರು.

ಸುನಕ್ ಹಿಂದಿನ ಸುತ್ತಿನ 101 ರಿಂದ 14 ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಇನ್ನೂ ಕೆಲವು ಸುತ್ತಿನ ಮತದಾನ ನಡೆಯಲಿದ್ದು ಸೆಪ್ಟಂಬರ್‌ 5 ಕ್ಕೆ ಪ್ರಧಾನಿಯ ಘೋಷಣೆಯಾಗಲಿದ್ದಾರೆ.

ಪ್ರಸ್ತುತ ಸನ್ನಿವೇಶ ಗಮನಿಸಿದರೆ ರಿಷಿ ಸುನಕ್‌ ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top