News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅತ್ತೆ-ಮಾವ ಕಷ್ಟಪಟ್ಟು ದೊಡ್ಡ ಸಂಸ್ಥೆ ಕಟ್ಟಿದ್ದಾರೆ: ಆರೋಪಗಳಿಗೆ ರಿಷಿ ಸುನಕ್‌ ಪ್ರತ್ಯುತ್ತರ

ಲಂಡನ್: ತಮ್ಮ ಪತ್ನಿಯ ಆದಾಯಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದಗಳಿಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್ ಪ್ರಧಾನಿ ಆಕಾಂಕ್ಷಿ ಭಾರತೀಯ ಮೂಲದ ರಿಷಿ ಸುನಕ್ ಅವರು, ತನ್ನ ಅತ್ತೆ ಮತ್ತು ಮಾವ ಕಷ್ಟಪಟ್ಟು ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ ಎಂದಿದ್ದಾರೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿಯ ಪತಿ. ಅಕ್ಷತಾ ಮೂರ್ತಿ ಅವರ ವಿರುದ್ಧ ತೆರಿಗೆ ವಂಚನೆಯ ಆರೋಪಗಳು ಕೇಳಿ ಬಂದಿದ್ದವು.

ವಿವಾದದ ಬಳಿಕ ಅಕ್ಷತಾ ಮೂರ್ತಿ ತಮ್ಮ ನಾನ್ ಡೊಮಿಸೈಲ್ ಸ್ಥಾನಮಾನವನ್ನು ಹಿಂತಿರುಗಿಸಿದ್ದಾರೆ‌. ನಾನು ಕೂಡ ಅಮೆರಿಕದ ಗ್ರೀನ್ ಕಾರ್ಡ್ ಹಿಂದಿರುಗಿಸಿದ್ದೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

“ನನ್ನ ಮಾವ ಬಹಳ ಕಷ್ಟಪಟ್ಟು ಮುಂದೆ ಬಂದಿದ್ದಾರೆ. ಅವರ ಬಳಿ ಕನಸು ಇತ್ತು. ಆದರೆ ಹಣ ಇರಲಿಲ್ಲ. ಅತ್ತೆ ನೀಡಿದ ಉಳಿತಾಯದ ಹಣವನ್ನು ಬಳಕೆ ಮಾಡಿಕೊಂಡು ಅವರು ಅತ್ಯಂತ ಪ್ರತಿಷ್ಠಿತ ಮತ್ತು ದೊಡ್ಡ ಸಂಸ್ಥೆಯನ್ನು ಕಟ್ಟಿದ್ದಾರೆ. ಇಂದು ಆ ಸಂಸ್ಥೆ ಬ್ರಿಟನ್‌ನಲ್ಲಿ ಹಲವಾರು ಜನರಿಗೆ ಉದ್ಯೋಗ ನೀಡಿದೆ” ಎಂದಿದ್ದಾರೆ.

“ಅವರ ಯಶೋಗಾಥೆ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರಧಾನಿಯಾಗಿ ನಾನು ಕೂಡ ಇಂತಹ ಹಲವಾರು ಕಥೆಗಳನ್ನು ಮನೆ‌ ಮನೆಗಳಲ್ಲಿ ಹುಟ್ಟು ಹಾಕುವಂತೆ ಮಾಡುತ್ತೇನೆ” ಎಂದಿದ್ದಾರೆ.

42 ವರ್ಷದ ರಿಷಿ ಸುನಾಕ್ ಅವರು ಯುಕೆಯಲ್ಲಿ ಜನಿಸಿದ್ದಾರೆ. ಚಾನ್ಸಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಟಿವಿ ಸಂದರ್ಶನದ ಸಂದರ್ಭದಲ್ಲಿ ಅವರ ಪತ್ನಿಯ ಮೇಲಿನ ತೆರಿಗೆ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top