News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸಾಧಾರಣ ಪ್ರತಿಭೆ- ಮಂಗಳೂರು ಬಾಲಕಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ

ಮಂಗಳೂರು: ಅಸಾಧಾರಣ ಪ್ರತಿಭೆಗಾಗಿ ಮಂಗಳೂರಿನ ಪುಟ್ಟ ಬಾಲಕಿಯೊಬ್ಬಳ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಮಂಗಳೂರಿನ ಶಕ್ತಿನಗರ ನಿವಾಸಿ ವಿಕ್ರಂ ನಾಯಕ್ ಮತ್ತು ಮಧುರಾ ಪ್ರಭು ದಂಪತಿಯ ಪುತ್ರಿ ಹಿಮಾಂಶಿ ವಿ. ನಾಯಕ್ ಎಂಬ ಬಾಲಕಿಯೇ ಈ ಸಾಧನೆ ಮಾಡಿದವಳು.

ಹಿಮಾಂಶಿ 1 ವರ್ಷ 10 ತಿಂಗಳಿನ ವಯಸ್ಸಿನಲ್ಲಿ 9 ಪ್ರಾಣಿಗಳನ್ನು, 5 ರೀತಿಯ ಗೊಂಬೆಗಳನ್ನು, 7 ಹಣ್ಣುಗಳನ್ನು, 12 ಹಕ್ಕಿಗಳನ್ನು, ದೇಹದ ವಿವಿಧ15 ಅಂಗಗಳನ್ನು ಗುರುತಿಸುತ್ತಾಳೆ. ಇಂಗ್ಲಿಷ್ ವರ್ಣಮಾಲೆಯ ‘ಎ’ಯಿಂದ ‘ಝಡ್‌’ವರೆಗಿನ 26 ಅಕ್ಷರಗಳನ್ನು ಅಕ್ಷರಕೊಂದು ಪದವನ್ನು ಸೇರಿಸಿ ತಪ್ಪಿಲ್ಲದೆ ಉಚ್ಚಾರ ಮಾಡುತ್ತಾಳೆ. ಮೂರು ಇಂಗ್ಲಿಷ್ ಪದ್ಯಗಳನ್ನು ಹೇಳುತ್ತಾಳೆ. 1ರಿಂದ 10ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಂಖ್ಯೆಗಳನ್ನು ಹೇಳುತ್ತಾಳೆ. 10 ಪ್ರಾಣಿ ಮತ್ತು ಪಕ್ಷಿಗಳು ಕೂಗುವುದನ್ನು ಮಿಮಿಕ್ರಿ ಮಾಡುತ್ತಾಳೆ.

ಆಕೆಯ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌‌ನಲ್ಲಿ ಹೆಸರು ದಾಖಲಾಗಿದ್ದಲ್ಲದೆ, ಪ್ರಶಸ್ತಿ ಪದಕದ ಜೊತೆಗೆ ಶ್ಲಾಘನೆ ಪ್ರಮಾಣಪತ್ರವೂ ಲಭಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top