ಮೋದಿ ಸರ್ಕಾರ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತಂದರೂ ಅದಕ್ಕೊಂದು ವಿಶೇಷತೆ, ದೂರದೃಷ್ಟಿ, ಒಂದು ಗುರಿ ಇರುತ್ತದೆ. ಎಲ್ಲರನ್ನೂ ತಲುಪುವಂತೆ ಯೋಜನೆಯನ್ನು ರೂಪಿಸಲಾಗುತ್ತದೆ. ಸ್ಕಿಲ್ ಇಂಡಿಯಾ ಮಿಷನ್ ಕೂಡ ಮಹತ್ವದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಮಹತ್ವಾಕಾಂಕ್ಷೆಯ ಯೋಜನೆ
ಸ್ಕಿಲ್ ಇಂಡಿಯಾ ಮಿಷನ್ನ 7ನೇ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಸ್ಕಿಲ್ ಇಂಡಿಯಾ ಮಿಷನ್ ಎಂದೂ ಕರೆಯಲ್ಪಡುವ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್ ಅನ್ನು 2015 ರ ಜುಲೈ 15ರಂದು ದಿನದಂದು ಪ್ರಾರಂಭಿಸಲಾಯಿತು.
ಸ್ಕಿಲ್ ಇಂಡಿಯಾವು ಮೋದಿ ಸರ್ಕಾರದ ಒಂದು ಮಹತ್ವದ ಉಪಕ್ರಮವಾಗಿದ್ದು, ಕೌಶಲ್ಯಗಳೊಂದಿಗೆ ಯುವಜನರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವ ಗುರಿಯೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗಿದೆ.
ಮಿಷನ್ ಯುವಕರ ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ ಮತ್ತು ಉತ್ತಮ ಜೀವನೋಪಾಯವನ್ನು ಪಡೆಯಲು ಯುವಕರು ತರಬೇತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಯುವಕರು ತರಬೇತಿ ಪಡೆಯುತ್ತಿದ್ದಾರೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಇದುವರೆಗೆ ಒಂದು ಕೋಟಿ 36 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗಿದೆ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲಯ ಯೋಜನೆಯಡಿ 11 ಲಕ್ಷದ 28 ಸಾವಿರ ಅಭ್ಯರ್ಥಿಗಳು ತರಬೇತಿ ಪಡೆದಿದ್ದು, ಸುಮಾರು ಏಳು ಲಕ್ಷ ಉದ್ಯೋಗಾವಕಾಶ ಪಡೆದಿದ್ದಾರೆ.
2022 ರ ವೇಳೆಗೆ 40 ಕೋಟಿಗೂ ಹೆಚ್ಚು ಯುವಕರಿಗೆ ಮಾರುಕಟ್ಟೆ ಸಂಬಂಧಿತ ಕೌಶಲ್ಯಗಳಲ್ಲಿ ಸಾಕಷ್ಟು ತರಬೇತಿಯನ್ನು ನೀಡುವ ಗುರಿಯನ್ನು ಸ್ಕಿಲ್ ಇಂಡಿಯಾ ಮಿಷನ್ ಇಟ್ಟುಕೊಂಡಿದೆ. ಇದು ದೇಶದೊಳಗೆ ಪ್ರತಿಭೆಗಳ ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹಿಂದುಳಿದ ವಲಯಗಳಿಗೆ ಒಟ್ಟಾರೆ ವ್ಯಾಪ್ತಿ ಮತ್ತು ಸ್ಥಳವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.