ನವದೆಹಲಿ: 4,389 ಕೋಟಿ ರೂಪಾಯಿಗಳ ಆಮದು ಸುಂಕ ವಂಚನೆ ಆರೋಪದ ಮೇಲೆ ಚೀನಾ ಮೂಲದ ಫೋನ್ ತಯಾರಕ ಸಂಸ್ಥೆ ಒಪ್ಪೋದ ಭಾರತ ಘಟಕಕ್ಕೆ ನೋಟಿಸ್ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.
ಒಪ್ಪೋಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ಬಳಿಕ ಸಿಕ್ಕ ದಾಖಲೆಗಳಿಂದ ಅದು ಕೆಲವು ಆಮದುಗಳು ಮತ್ತು ಚೀನಾ ಮೂಲದ ವಿವಿಧ MNC ಗಳಿಗೆ ರಾಯಧನ ಮತ್ತು ಪರವಾನಗಿ ಶುಲ್ಕಗಳ ರವಾನಿಸಿದ ಬಗೆಗೆ ಉದ್ದೇಶಪೂರ್ವ ಸುಳ್ಳು ಮಾಹಿತಿ ನೀಡಿದೆ ಎಂಬುದು ತಿಳಿದು ಬಂದಿತ್ತು. ಇದರ ನಂತರ ಜುಲೈ 8 ರಂದು Oppo ಇಂಡಿಯಾಗೆ ಶೋಕಾಸ್ ನೋಟಿಸ್ ಅನ್ನು ನೀಡಲಾಗಿದೆ. .
ಗುವಾಂಗ್ಡಾಂಗ್ ಒಪ್ಪೋ ಮೊಬೈಲ್ ಟೆಲಿಕಮ್ಯುನಿಕೇಶನ್ಸ್ ಕಾರ್ಪೊರೇಷನ್ ಲಿಮಿಟೆಡ್ನ ಅಂಗಸಂಸ್ಥೆಯಾದ Oppo Mobiles India Pvt Ltd ನ ತನಿಖೆಯ ಸಮಯದಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಸುಮಾರು 4,389 ಕೋಟಿ ರೂಪಾಯಿಗಳ ಕಸ್ಟಮ್ಸ್ ಸುಂಕ ವಂಚನೆಯನ್ನು ಪತ್ತೆಹಚ್ಚಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Oppo ಇಂಡಿಯಾ ಭಾರತದಾದ್ಯಂತ ಮೊಬೈಲ್ ಹ್ಯಾಂಡ್ಸೆಟ್ಗಳು ಮತ್ತು ಬಿಡಿಭಾಗಗಳ ತಯಾರಿಕೆ, ಜೋಡಣೆ, ಸಗಟು ವ್ಯಾಪಾರ ಮತ್ತು ವಿತರಣೆಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಇದು Oppo, OnePlus ಮತ್ತು Realme ಸೇರಿದಂತೆ ವಿವಿಧ ಬ್ರಾಂಡ್ಗಳ ಮೊಬೈಲ್ ಫೋನ್ಗಳಲ್ಲಿ ವ್ಯವಹಾರ ನಡೆಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.