ನವದೆಹಲಿ: ಕಾಶ್ಮೀರ ‘ಪೂರ್ಣವಾಗದ ಅಜೆಂಡಾ’ ಎಂದಿರುವ ಪಾಕಿಸ್ಥಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್ಗೆ ಭಾರತದ ಪಿಎಂಒ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ತಕ್ಕ ತಿರುಗೇಟು ನೀಡಿದ್ದಾರೆ.
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದಿರುವ ಅವರು, ಈ ಸಂಬಂಧ ಏನಾದರು ಬಗೆಹರಿಯದ ವಿಷಯವಿದ್ದರೆ ಅದು ಪಾಕ್ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಮತ್ತೆ ಭಾರತಕ್ಕೆ ಸೇರಿಸುವುದು ಎಂದಿದ್ದಾರೆ.
ಜಮ್ಮು ಕಾಶ್ಮೀರದ ಭಾಗವಾಗಿರುವ ಒಂದು ಪ್ರದೇಶ 65-66ರ ವರ್ಷಗಳ ಬಳಿಕವೂ ಅಕ್ರಮವಾಗಿ ಪಾಕಿಸ್ಥಾನದ ಬಳಿ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥ ಕಾಶ್ಮೀರ ಪೂರ್ಣಗೊಳ್ಳದ ಅಜೆಂಡಾ ಎಂದಿದ್ದ ಅಲ್ಲದೇ ಯುದ್ಧ ಸಂಭವಿಸಿದರೆ ಭಾರತ ಭರಿಸಲಾಗದ ಪೆಟ್ಟು ತಿನ್ನುತ್ತದೆ ಎಂದು ಎಚ್ಚರಿಕೆ ನೀಡಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.