ಕೊಲಂಬೋ: ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ದೇಶವನ್ನು ತೊರೆದಿದ್ದಾರೆ ಎಂದು ಉನ್ನತ ಮಟ್ಟದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಪಕ್ಸೆ ಮತ್ತು ಅವರ ಪತ್ನಿ ಶ್ರೀಲಂಕಾ ವಾಯುಪಡೆಯ AN32 ಟ್ರೂಪ್ ಟ್ರಾನ್ಸ್ಪೋರ್ಟ್ ಪ್ಲೇನ್ನಲ್ಲಿ ಮಾಲ್ಡೀವ್ಸ್ನ ಮಾಲೆಗೆ ಹಾರಿದ್ದಾರೆ. ಮಾಲೆಯ ವೆಲಾನಾ ವಿಮಾನ ನಿಲ್ದಾಣದಲ್ಲಿ ಅವರನ್ನು ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳು ಬರಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷ ರಾಜಪಕ್ಸೆ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಕಳೆದ ರಾತ್ರಿ ಕೊಲಂಬೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲೆಗೆ ತೆರಳಲು ಮಿಲಿಟರಿ ವಿಮಾನವನ್ನು ಏರಿದರು. ಅವರ ಕಿರಿಯ ಸಹೋದರ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಕೂಡ ದೇಶವನ್ನು ತೊರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಳೆದ ರಾತ್ರಿ ರಾಜಪಕ್ಸೆ ಅವರು ವಿಮಾನಕ್ಕಾಗಿ ವಿನಂತಿಸಿದ್ದಾರೆ ಮತ್ತು ಅವರಿಗೆ ವಿಮಾನವನ್ನು ಒದಗಿಸಲು ನಾವು ಭಾದ್ಯತೆಗಳನ್ನು ಹೊಂದಿದ್ದೇವೆ ಎಂದು ದ್ವೀಪ ರಾಷ್ಟ್ರದ ರಕ್ಷಣಾ ಅಧಿಕಾರಿಗಳು ಮಾಧ್ಯವುಗಳಿಗೆ ತಿಳಿಸಿದ್ದಾರೆ. ರಾಜಪಕ್ಸೆ ಅಧ್ಯಕ್ಷರಾಗಿ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿ ಮುಂದುವರಿದಿದ್ದಾರೆ. ರಾಷ್ಟ್ರಪತಿಗಳು ದೇಶ ತೊರೆದಿರುವುದನ್ನು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಕೂಡ ಖಚಿತಪಡಿಸಿದೆ.
ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ತೊರೆಯಲು ನಡೆಸಿದ ಎರಡು ಪ್ರಯತ್ನಗಳು ವಿಫಲವಾದ ಬಳಿಕ ವಾಯುಸೇನೆ ವಿಮಾನ ಬಳಸಿ ಪಲಾಯಣ ನಡೆಸಿದ್ದಾರೆ ಎನ್ನಲಾಗಿದೆ
ಗೋಟಬಯ ರಾಜಪಕ್ಸೆ ಅವರು ದೊಡ್ಡ ಮಟ್ಟದ ಭ್ರಷ್ಟಾಚಾರ ಮತ್ತು ಆರ್ಥಿಕ ದುರುಪಯೋಗದ ಆರೋಪವನ್ನು ಹೊತ್ತಿದ್ದಾರೆ. ಅವರ ಕುಟುಂಬದ ದುರಾಡಳಿ ಶ್ರೀಲಂಕಾವನ್ನು ದಿವಾಳಿಗೊಳಿಸಿದೆ. ಪ್ರಸ್ತುತ ಅದು ಸ್ವಾತಂತ್ರ್ಯದ ನಂತರದ ಅತೀ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.