ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಕಿರಿಯ ಸಹೋದರ ಮತ್ತು ಶ್ರೀಲಂಕಾದ ಮಾಜಿ ವಿತ್ತ ಸಚಿವ ಬಾಸಿಲ್ ರಾಜಪಕ್ಸೆ ಅವರು ಮಂಗಳವಾರ ಕೊಲಂಬೊ ವಿಮಾನ ನಿಲ್ದಾಣದಲ್ಲಿ ವಿಐಪಿ ಟರ್ಮಿನಲ್ ಮೂಲಕ ದೇಶವನ್ನು ತೊರೆಯಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರು ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆಯನ್ನು ರಾಷ್ಟ್ರಕ್ಕೆ ಸಾರ್ವಜನಿಕವಾಗಿ ಘೋಷಿಸುವುದಕ್ಕೂ ಮುಂಚಿತವಾಗಿ 71 ವರ್ಷದ ಬಸಿಲ್ ರಾಜಪಕ್ಸೆ ಅವರು ಬಿಕ್ಕಟ್ಟು ಪೀಡಿತ ದ್ವೀಪ ರಾಷ್ಟ್ರವನ್ನು ತೊರೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ರಾಜಪಕ್ಸೆ ಸೋಮವಾರ ಜುಲೈ 1 ರಂದು ತಮ್ಮ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದರು ಮತ್ತು ನಂತರ ಅದನ್ನು ಹಿರಿಯ ಸರ್ಕಾರಿ ಅಧಿಕಾರಿಗೆ ಹಸ್ತಾಂತರಿಸಲಾಯಿತು ಮತ್ತು ಅವರು ಅದನ್ನು ಸಂಸತ್ತಿನ ಸ್ಪೀಕರ್ಗೆ ಹಸ್ತಾಂತರಿಸಿದ್ದಾರೆ.
ಅಮೆರಿಕ ಪಾಸ್ಪೋರ್ಟ್ ಹೊಂದಿರುವ ಬೆಸಿಲ್ ಅವರು ಇಂಧನ, ಆಹಾರ ಮತ್ತು ಇತರ ಅಗತ್ಯಗಳ ಕೊರತೆಯ ವಿರುದ್ಧ ಬೀದಿ ಪ್ರತಿಭಟನೆಗಳು ತೀವ್ರಗೊಂಡಿದ್ದರಿಂದ ಏಪ್ರಿಲ್ ಆರಂಭದಲ್ಲಿ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಜೂನ್ನಲ್ಲಿ ಸಂಸತ್ತಿನಲ್ಲಿನ ತಮ್ಮ ಸ್ಥಾನವನ್ನು ತೊರೆದರು.
ಕೊಲಂಬೊ ವಿಮಾನ ನಿಲ್ದಾಣದ ವಿಐಪಿ ಟರ್ಮಿನಲ್ನಲ್ಲಿ ಬಾಸಿಲ್ ಅವರಿಗೆ ಸೇವೆ ನೀಡಲು ಕರ್ತವ್ಯ ನಿರತ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಶ್ರೀಲಂಕಾ ವಲಸೆ ಅಧಿಕಾರಿಗಳ ಸಂಘ ತಿಳಿಸಿದೆ
ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಬೆಸಿಲ್ ಅವರನ್ನು ವ್ಯಾಪಕವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ. ಭ್ರಷ್ಟಾಚಾರದ ಆರೋಪಗಳು ಅವರ ಮೇಲೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.