ಕೊಲಂಬೊ: ಶ್ರೀಲಂಕಾದಲ್ಲಿ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ನಡುವೆ ಶನಿವಾರ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಭಾರೀ ಮೊತ್ತದ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಶ್ರೀಲಂಕಾದ ದಿನಪತ್ರಿಕೆ ಡೈಲಿ ಮಿರರ್ ಪ್ರಕಾರ, ವಶಪಡಿಸಿಕೊಂಡ ಹಣವನ್ನು ಪ್ರತಿಭಟನಾಕಾರರು ಭದ್ರತಾ ಘಟಕಗಳಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಶನಿವಾರದ ಮಹಾ ಕ್ರಾಂತಿಯ ನಂತರ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ, ಸಾವಿರಾರು ಪ್ರತಿಭಟನಾಕಾರರು ಕೊಲಂಬೊದ ರಾಜಧಾನಿಯಲ್ಲಿರುವ ಗೊಟಬಯ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇದಕ್ಕೆ ಬೆದರಿ ಗೋಟಬಯ ಅವರು ಅಜ್ಞಾತ ಸ್ಥಳಕ್ಕೆ ಓಡಿಹೋಗಿದ್ದಾರೆ.
ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಬೇಡಿಕೆಯೊಂದಿಗೆ ಪೊಲೀಸರು ಹಾಕಿದ್ದ ಭದ್ರತಾ ಕವಚಗಳನ್ನು ಹರಿದು ಮನೆಗೆ ಪ್ರತಿಭಟನಾಕಾರರು ನುಗ್ಗಿದ್ದು ಅಲ್ಲಿನ ಈಜುಕೊಳದಲ್ಲಿ ಸ್ನಾನ ಮಾಡಿದ್ದಾರೆ ಮತ್ತು ಅವರ ಅಡುಗೆಮನೆ ಮತ್ತು ಮನೆಯೊಳಗೆ ನುಗ್ಗಿ ಅಸ್ತವ್ಯಸ್ತ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊವೊಂದರಲ್ಲಿ, ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸದಿಂದ ಪತ್ತೆಯಾದ ಕರೆನ್ಸಿ ನೋಟುಗಳನ್ನು ಎಣಿಸುತ್ತಿರುವುದನ್ನು ಕಾಣಬಹುದು ಎಂದು ಮಾಧ್ಯಮವು ತಿಳಿಸಿದೆ.
ಈ ಬೆಳವಣಿಗೆ ನಡುವೆ ದೇಶದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ಎಲ್ಲಾ ನಾಗರಿಕರು ತಮ್ಮ ಬೆಂಬಲವನ್ನು ನೀಡಬೇಕೆಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಶವೇಂದ್ರ ಸಿಲ್ವಾ ಒತ್ತಾಯಿಸಿದ್ದಾರೆ. ತ್ರಿಪಡೆ ಕಮಾಂಡರ್ಗಳ ಜೊತೆಗೂಡಿ ವಿಶೇಷ ಹೇಳಿಕೆಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಿಂದ ಕೋಪಗೊಂಡ ಶ್ರೀಲಂಕಾದ ಪ್ರತಿಭಟನಾಕಾರರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.