ಬೆಂಗಳೂರು: ಕೇಂದ್ರ ಸರ್ಕಾರವು ನಿನ್ನೆ ಸ್ಟಾರ್ಟ್ ಅಪ್ ರ್ಯಾಕಿಂಗ್ ಪಟ್ಟಿ -2021 ಅನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ಅತ್ಯುತ್ತಮ ಸಾಧಕನಾಗಿ ಹೊರಹೊಮ್ಮಿದೆ. ಗುಜರಾತ್ ಮತ್ತು ಮೇಘಾಲಯಕ್ಕೂ ಈ ಹೆಗ್ಗಳಿಕೆ ದೊರೆತಿದೆ.
ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಗೆ ಪೂರಕವಾದ ವಾತಾವರಣ ನಿರ್ಮಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯನ್ನು ಈ ರ್ಯಾಕಿಂಗ್ ಒಳಗೊಂಡಿದೆ.
ಅತ್ಯುತ್ತಮ ಸಾಧಕ, ಅತ್ಯುತ್ತಮ ಕಾರ್ಯನಿರ್ವಾಹಕ, ಅತ್ಯುತ್ತಮ ನಾಯಕ, ಭರವಸೆಯ ನಾಯಕ, ಅತ್ಯುತ್ತಮ ಉದಯೋನ್ಮುಖ ನಾಯಕ- ಹೀಗೆ ಐದು ವಿಭಾಗಗಳಲ್ಲಿ ರಾಜ್ಯಗಳನ್ನು ವಿಂಗಡಿಸಿ ಶ್ರೇಯಾಂಕವನ್ನು ನೀಡಲಾಗಿದೆ. ಇದರಲ್ಲಿ ಅತ್ಯುತ್ತಮ ಸಾಧಕ ಕೆಟಗರಿಯಲ್ಲಿ ಕರ್ನಾಟಕ ಅಗ್ರ ಸಾಧಕನಾಗಿ ಹೊರಹೊಮ್ಮಿದೆ.
ಸ್ಟಾರ್ಟ್-ಅಪ್ ಅತ್ಯುತ್ತಮ ಕಾರ್ಯನಿರ್ವಾಹಕ ಕೆಟಗರಿಯಲ್ಲಿ ತೆಲಂಗಾಣ, ಕೇರಳ, ಮಹಾರಾಷ್ಟ್ರ, ಒಡಿಶಾ, ಜಮ್ಮು ಮತ್ತು ಕಾಶ್ಮೀರ ಇದೆ.
ಸ್ಟಾರ್ಟ್-ಅಪ್ ಅತ್ಯುತ್ತಮ ನಾಯಕ ಕೆಟಗರಿಯಲ್ಲಿ ತಮಿಳುನಾಡು, ಉತ್ತರಾಖಂಡ, ಉತ್ತರಪ್ರದೇಶ, ಪಂಜಾಬ್, ಅಸ್ಸಾಂ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ಗೋವಾ ಇದೆ.
ಸ್ಟಾರ್ಟ್- ಅಪ್ ಭರವಸೆ ನಾಯಕ ಪಟ್ಟಿಯಲ್ಲಿ ಬಿಹಾರ ಆಂಧ್ರಪ್ರದೇಶ, ಮಿಜೋರಾಂ, ಲಡಾಕ್ ಇದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.