ವಾರಣಾಸಿ: ವಿಶ್ವನಾಥ ಕಾರಿಡಾರ್ ಮೂಲಕ ಕಾಶಿ ವಿಶ್ವನಾಥ ದೇಗುಲದ ಐತಿಹಾಸಿಕ ವಿಸ್ತರಣೆಯ ನಂತರ, ಪವಿತ್ರ ನಗರವಾದ ವಾರಣಾಸಿ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ. ʼಪಾವನ ಪಥʼ ಎಂಬ 102 ದೇವಾಲಯಗಳನ್ನು ಒಳಗೊಂಡಿರುವ ಧಾರ್ಮಿಕ ಪ್ರವಾಸೋದ್ಯಮ ಯೋಜನೆಯನ್ನು ಮೋದಿ ಸರ್ಕಾರ ಅನುಷ್ಠಾನಕ್ಕೆ ತರಳಿದೆ.
ಜುಲೈ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಷ್ಟವಿನಾಯಕ, ವಿನಾಯಕ ಮತ್ತು ದ್ವಾದಶ ಜ್ಯೋತಿರ್ಲಿಂಗ ಯಾತ್ರೆಗಳಿಗೆ 12.52 ಕೋಟಿ ರೂಪಾಯಿ ಮೌಲ್ಯದ ಎರಡು ಪ್ಯಾಕೇಜ್ಗಳು ಮತ್ತು ಅಷ್ಟ ಭೈರವನ ಮತ್ತು ನವ ಗೌರಿ ಯಾತ್ರೆಗಳಿಗಾಗಿ ಪವನ್ ಪಥ ಯೋಜನೆಗೆ ಆರಂಭ ನೀಡಲಿದ್ದಾರೆ.
ಒಟ್ಟಾರೆ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಪಾವನ ಪಥ ಅನುಷ್ಠಾನಕ್ಕೆ ತರಲಾಗುತ್ತಿದೆ.
ಪಾವನ್ ಪಥ ಯೋಜನೆಯಲ್ಲಿ ನಾಲ್ಕು ಪ್ಯಾಕೇಜ್ಗಳಿದ್ದು, ಈ ಯೋಜನೆಯ ಒಟ್ಟು ವೆಚ್ಚ 26 ಕೋಟಿ ರೂಪಾಯಿ. ಕಾಶಿಯ ಚಾರ್ ಧಾಮ್, ಕಾಶಿಯ ವಿಷ್ಣು ಮತ್ತು ದ್ವಾದಶ ಆದಿತ್ಯ ಯಾತ್ರೆ ಮತ್ತು ನವದುರ್ಗಾ ಯಾತ್ರೆ ಸೇರಿದಂತೆ ಎರಡು ಪ್ಯಾಕೇಜ್ಗಳ ಕೆಲಸವನ್ನು 2021-22 ರಲ್ಲಿ ಪ್ರಾರಂಭಿಸಲಾಯಿತು. ಜುಲೈ 7 ರಂದು ಪ್ರಧಾನಿ ಚಾಲನೆ ನೀಡುವುದರೊಂದಿಗೆ, ಕಾಶಿಯ ಭೈರವ್, ನವ ಗೌರಿ ಯಾತ್ರೆ, ವಿನಾಯಕ್ ಮತ್ತು ದ್ವಾದಶ ಜ್ಯೋತಿರ್ಲಿಂಗ್ ಯಾತ್ರೆ ಸೇರಿದಂತೆ ಪ್ಯಾಕೇಜ್ಗಳ ಕೆಲಸ ಪ್ರಾರಂಭವಾಗಲಿದೆ.
ಪಾವನ ಪಥ ಯೋಜನೆಯಡಿ ಭೈರವನ ಎಂಟು ದೇಗುಲಗಳು, ನವಗೌರಿ ಮತ್ತು ನವ ದುರ್ಗಾ ಯಾತ್ರೆಯ ಒಂಬತ್ತು, ಅಷ್ಟವಿನಾಯಕ ಯಾತ್ರೆ, ಅಷ್ಟ ಪ್ರಧಾನ ವಿನಾಯಕ ಯಾತ್ರೆ, ದ್ವಾದಶ ಜ್ಯೋತಿರ್ಲಿಂಗ ಯಾತ್ರೆ, ಕಾಶಿ ವಿಷ್ಣು ಯಾತ್ರೆ2 ಸೇರಿದಂತೆ ಒಟ್ಟು 102 ದೇವಾಲಯಗಳು ಇರಲಿವೆ. ದ್ವಾದಶ ಆದಿತ್ಯ ಯಾತ್ರೆಯ ಕಾಶಿಯ ಚಾರ್ ಧಾಮ್ ಯಾತ್ರೆಯ ನಾಲ್ಕು ದೇವಾಲಯಗಳು ಮತ್ತು ಏಕಾದಶ ವಿನಾಯಕ ಯಾತ್ರೆಯ 11 ದೇವಾಲಯಗಳು ಇರುತ್ತವೆ.
ಈ ಎಲ್ಲಾ ಯಾತ್ರೆಗಳ ಮಾರ್ಗಗಳು ಹಾಗೂ ಯಾತ್ರೆಯ ಮಾರ್ಗಗಳಲ್ಲಿರುವ ದೇವಾಲಯಗಳಲ್ಲಿ ಯಾತ್ರಾರ್ಥಿಗಳು ಮತ್ತು ಸ್ಥಳೀಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅವಕಾಶ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.