ತಿರುವನಂತಪುರಂ: ಕೇರಳದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಣೆ ಮಾಡಿದ್ದ ಸಿಪಿಐ(ಎಂ) ಮೆರವಣಿಗೆಯಲ್ಲಿ ಮಹಾನ್ ದಾರ್ಶನಿಕ ನಾರಾಯಣ ಗುರುವನ್ನು ಶಿಲುಬೆಗೆ ಹಾಕಿ ಎಡವಟ್ಟು ಮಾಡಿಕೊಂಡಿದೆ.
ಟ್ಯಾಬ್ಲೋದಲ್ಲಿ ಗುರುವಿನ ವೇಷಧಾರಿಯ ಹಿಂದೆ ಶಿಲುಬೆಯನ್ನು ಇಡಲಾಗಿದೆ. ಮತ್ತು ಅವರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಬರೆಯಲಾಗಿದೆ, ಈ ಸಂದೇಶವನ್ನು ಕೂಡ ಅಸಂಬದ್ಧವಾಗಿ ಬರೆಯಲಾಗಿತ್ತು ಎಂದು ಹೇಳಲಾಗಿದೆ.
ಸಿಪಿಎಂನ ಈ ಕ್ರಮಕ್ಕೆ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು, ಗುರುವನ್ನು ಅವಮಾನಿಸುವುದನ್ನು ನಾವು ಸಹಿಸೋದಿಲ್ಲ ಎಂದು ಎಚ್ಚರಿಸಿದೆ. ವಿಶ್ವಹಿಂದೂ ಪರಿಷತ್ ಕೂಡ ಸಿಪಿಎಂ ಗುರುವನ್ನು ಅವಮಾನಿಸಲೆಂದೇ ಹೀಗೆ ಮಾಡಿದೆ ಎಂದು ಆರೋಪಿಸಿದೆ.
ಆದರೆ ಸಿಪಿಎಂ ಮಾತ್ರ ಗುರುವನ್ನು ಆಪಾದಿಸಿದ ಆರೋಪವನ್ನು ತಳ್ಳಿ ಹಾಕಿದ್ದು, ಆರ್ಎಸ್ಎಸ್ ಮತ್ತು ವಿಎಚ್ಪಿ ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.