ನವದೆಹಲಿ: ಬ್ಯಾಂಕಿಂಗ್ ವಲಯವು 2021-22ರಲ್ಲಿ ಕಡಿಮೆ ವಂಚನೆ ಪ್ರಕರಣಗಳನ್ನು ದಾಖಲಿಸಿದೆ. ವಂಚನೆ ಪ್ರಕರಣಗಳಲ್ಲಿ ರೂ 100 ಕೋಟಿಗೂ ಅಧಿಕ ಇಳಿಕೆ ಕಂಡು ಬಂದಿದೆ ಎಂದು ವರದಿಗಳು ತಿಳಿಸಿವೆ.
ಅಧಿಕೃತ ಮಾಹಿತಿಯ ಪ್ರಕಾರ, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿನ ವಂಚನೆ ಪ್ರಕರಣಗಳ ಸಂಖ್ಯೆ 2020-21ರಲ್ಲಿ 265 ರಿಂದ 2021-22ರಲ್ಲಿ 118 ಕ್ಕೆ ಇಳಿದಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳ (PSB) ವಿಷಯದಲ್ಲಿ, 2021 ರ ಹಣಕಾಸು ವರ್ಷದಲ್ಲಿ ರೂ 100 ಕೋಟಿಗೂ ಅಧಿಕ ವಂಚನೆ ಪ್ರಕರಣಗಳ ಒಟ್ಟು ಸಂಖ್ಯೆ 167 ರಿಂದ 80 ಕ್ಕೆ ಇಳಿದಿದೆ. ಖಾಸಗಿ ವಲಯದಲ್ಲಿ 2021-22ರ ಹಣಕಾಸು ವರ್ಷದಲ್ಲಿ ಅಂತಹ ಪ್ರಕರಣಗಳು 98 ರಿಂದ 38 ಕ್ಕೆ ಇಳಿದಿದೆ
ಒಟ್ಟು ಮೊತ್ತಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಹಣಕಾಸು ವರ್ಷ 2020-21 ರಲ್ಲಿ ವಂಚನೆ ರೂ 65,900 ಕೋಟಿಯಿಂದ ರೂ28,000 ಕೋಟಿಗೆ ಇಳಿದಿದೆ.
ಖಾಸಗಿ ವಲಯದ ಬ್ಯಾಂಕ್ಗಳಿಗೆ ಹಣಕಾಸು ವರ್ಷ 2021-2022 ರಲ್ಲಿ ರೂ 39,900 ಕೋಟಿಯಿಂದ ರೂ 13,000 ಕೋಟಿಗೆ ಇಳಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.