ನವದೆಹಲಿ: ಪಿಪಿಎ (Power Purchase Agreements) ರಹಿತವಾದ ಥರ್ಮಲ್ ಘಟಕಗಳ 8,000 ಮೆಗಾವ್ಯಾಟ್ (MW) ವಿದ್ಯುತ್ ಅನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ರಾಜ್ಯಗಳಿಂದ ಬಿಡ್ಗಳನ್ನು ಆಹ್ವಾನಿಸುತ್ತದೆ ಎಂದು ವಿದ್ಯುತ್ ಸಚಿವ ಆರ್ಕೆ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿ ವಿದ್ಯುತ್ ಖರೀದಿ ಒಪ್ಪಂದ ರಹಿತವಾದ ಥರ್ಮಲ್ ಪ್ಲಾಂಟ್ಗಳಲ್ಲಿ ಉತ್ಪಾದನೆಯಾದ ಒಟ್ಟು 8,000 ಮೆಗಾವ್ಯಾಟ್ ವಿದ್ಯುತ್ ಮಾರಾಟ ಮಾಡಲು ಬಿಡ್ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರೂ ಆಗಿರುವ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿ ಪಿಪಿಎ ಇಲ್ಲದ ಪ್ಲಾಂಟ್ಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “8,000 ಮೆಗಾವ್ಯಾಟ್ ಸಾಮರ್ಥ್ಯದ ಥರ್ಮಲ್ ಪ್ಲಾಂಟ್ಗಳು ಪಿಪಿಎಗಳನ್ನು ಹೊಂದಿಲ್ಲ” ಎಂದು ಹೇಳಿದರು.
ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಯೋಜನೆಯನ್ನು ಹಂಚಿಕೊಂಡ ಸಚಿವರು, ತಮ್ಮ ವಿದ್ಯುತ್ ಅಗತ್ಯವನ್ನು ಕಳುಹಿಸಲು ರಾಜ್ಯಗಳನ್ನು ಕೇಳಲಾಗಿದೆ ಮತ್ತು ಅದರ ಪ್ರಕಾರ ಬಿಡ್ಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.